
ಗುಡ್ ನ್ಯೂಸ್: ಸೆಪ್ಟೆಂಬರ್ 22 ರಿಂದ ಮೊಸರು, ತುಪ್ಪ ಸೇರಿದಂತೆ ನಂದಿನಿ ಉತ್ಪನ್ನಗಳ ದರ ಇಳಿಕೆ ಸಾಧ್ಯತೆ
ಬೆಂಗಳೂರು : ಮೊನ್ನೆ ಅಷ್ಟೇ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಆಹಾರ ಉತ್ಪನ್ನಗಳ ಮೇಲಿನ ಜಿಎಸ್ಟಿಯನ್ನು ಶೇ 12ರಿಂದ 5ಕ್ಕೆ ಇಳಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಸೆಪ್ಟೆಂಬರ್ 22ರಿಂದ ಮೊಸರು, ತುಪ್ಪ, ಬೆಣ್ಣೆ, ಲಸ್ಸಿ ಸೇರಿದಂತೆ ನಂದಿನಿಯ ವಿವಿಧ ಉತ್ಪನ್ನಗಳ ಬೆಳೆ ಇಳಿಕೆ ಮಾಡಲು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ ಮುಂದಾಗಿದೆ. ಮೊಸರಿಗೆ ದ ಲೀಟರ್ ಗೆ ಬರೋಬ್ಬರಿ 4 ರೂಪಾಯಿವರೆಗೆ ಕಡಿಮೆಯಾಗುವ ಸಾಧ್ಯತೆಗಳಿವೆ.ಈ ನಂದಿನ ಉತ್ಪನ್ನಗಳ ದರ ಇಳಿಕೆ ಕುರಿತು ನಾಡಿದ್ದು ಅಂದರೆ ಸೆಪ್ಟೆಂಬರ್ 20ರಂದು ಕೆಎಂಎಫ್ ನ ಹಿರಿಯ ಅಧಿಕಾರಿಗಳ ಮಹತ್ವದ ಸಭೆ ನಡೆಯಲಿದ್ದು, ಬೆಲೆ ಇಳಿಕೆ ಬಗ್ಗೆ ಕೈಗೊಳ್ಳಲಿದೆ. ಒಂದು ವೇಳೆ ಸಭೆಯಲ್ಲಿ ದರ ಇಳಿಕೆ ಬಗ್ಗೆ ನಿರ್ಧಾರ ಕೈಗೊಂಡರೆ, ಸೋಮವಾರದಿಂದಲೇ ನಂದಿನಿ ಉತ್ಪನ್ನಗಳ ಪರಿಸ್ಕೃತ ದರ ಜಾರಿಯಾಗುವ ಸಾಧ್ಯತೆಗಳು ಇವೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಭಾರೀ ಅನುಕೂಲವಾಗಲಿದೆ.


