ಸುದ್ದಿ

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ: ಎ.ಬಿ.ಬಸವರಾಜ್ ರವರಿಂದ ಮಹತ್ವದ ತೀರ್ಪು ಬೆಚ್ಚಿಬಿದ್ದ ನಕಲಿ ಮಾಲೀಕರು

Share It

ಕಾನೂನು ಬಾಹಿರವಾಗಿ ಮಂಜೂರು ಮಾಡಿದ್ದ ಜಮೀನು ಸರ್ಕಾರದ ವಶಕ್ಕೆ..

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ನಗರ ವ್ಯಾಪ್ತಿಯ ಸಮೀಪದಲ್ಲಿರುವ ಅರೇಹಳ್ಳಿ ಗುಡ್ಡದಹಳ್ಳಿ ಸರ್ವೆ ನಂಬರ್ 57 ರಲ್ಲಿ 10 ಎಕರೆ 25 ಗುಂಟೆ ಜಮೀನು, ಗೋಮಾಳ ಎಂದು ಸರ್ಕಾರಿ ದಾಖಲಾಗಳಲ್ಲಿ ಸ್ಪಷ್ಟವಾಗಿ ನಮುದಾಗಿದ್ದು ಅದರಲ್ಲಿ 6 ಎಕರೆ ಜಮೀನನ್ನು 1-20 ಗುಂಟೆಯಂತೆ 4 ಜನ ಕಾನೂನು ಬಾಹಿರವಾಗಿ ಕೆಲ ಅಧಿಕಾರಿಗಳು ಜೊತೆಗೂಡಿ ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ಮಂಜೂರು ಮಾಡಿಸಿಕೊಂಡಿರುತ್ತಾರೆ. ಬಗರ್ ಹುಕ್ಕುo ಸಾಗುವಳಿಯೂ ಸಹ ನೀಡಿರುತ್ತಾರೆ. ಸದರಿ ಜಮೀನಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಬುದ್ಧ ಕರ್ನಾಟಕ ಭೀಮ ಸೇನೆ ಸಂಘಟನೆ ಹಾಗೂ ಇನ್ನಿತರ ಸಂಘಟನೆ ಮತ್ತು ವಕೀಲರು ಸೇರಿದಂತೆ ಸುಮಾರು ಬಾರಿ ಪ್ರತಿಭಟನೆ ಧರಣಿಯನ್ನ ಮಾಡಿ ಅಧಿಕಾರಿಗಳಿಗೆ ಮನವಿಯನ್ನ ಸಲ್ಲಿಸಿದ್ದರು. ಮತ್ತು ಜಿಲ್ಲಾಧಿಕಾರಿ ರವರ ಕಚೇರಿಯಲ್ಲಿ ಸುಮೋಟೋ ಕೇಸು ಸಹ ದಾಖಲಾಗಿತ್ತು. ಅದರಂತೆ ದಾಖಲಾತಿಗಳನ್ನ ಪರಿಶೀಲಿಸಿ ನಕಲಿ ದಾಖಲೆಗಳು ಎಂದು ಪರಿಗಣಿಸಿ ಸ್ಥಳಕ್ಕೆ ಭೇಟಿ ನೀಡಿ 40-50 ಕೋಟಿ ಬೆಲೆಬಾಳುವ ಜಮೀನನ್ನ ಸರ್ಕಾರಕ್ಕೆ ವಶಪಡಿಸಿಕೊಳ್ಳಲಾಯಿತು.

ಗೌರವಾನ್ವಿತ ಜಿಲ್ಲಾಧಿಕಾರಿ ರವರಿಗೆ ಸಂಘಟನೆ ಹಾಗು ದೊಡ್ಡಬಳ್ಳಾಪುರ ಜನತೆಯಿಂದ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.