
ದೊಡ್ಡಬಳ್ಳಾಪುರ ತಾಲ್ಲೂಕು:ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು ಮತದಾನ ಶೇ 81.34%
ನಗರಸಭೆ ದೊಡ್ಡ ಬಳ್ಳಾಪುರ ವಾರ್ಡ್ no -21 ಉಪ ಚುನಾವಣೆ :67.11% ಮತದಾನ ಆಗಿರುತ್ತದೆ..

ಇಂದು ದಿನಾಂಕ 21-12-2025 ರಂದು ಬೆಳಿಗ್ಗೆ 7 ರಿಂದ ಸಂಜೆ 5 ರವರಿಗೆ ದೊಡ್ಡ ಬಳ್ಳಾಪುರ ತಾಲೂಕಿನ ಬಾ ಶೆಟ್ಟಹಳ್ಳಿ ಪಟ್ಟಣ ಪಂಚಾಯತ್ ಗೆ ಮೊದಲ ಬಾರಿಗೆ ನಡೆಯುತ್ತಿರುವ ಸಾರ್ವತ್ರಿಕಾ ಚುನಾವಣೆಯ ಮತಗಟ್ಟೆಗಳಿಗೆ ಕರ್ನಾಟಕ ರಾಜ್ಯ ಚುನಾವಣೆ ಆಯುಕ್ತರಾದ ಶ್ರೀ G S ಸಿಂಗ್ರೆಶಿ ರವರು ಮತ್ತು ಜಿಲ್ಲಾಧಿಕಾರಿಗಳಾದ ಶ್ರೀ ಎ ಬಿ ಬಸವರಾಜ್, AC ದುರ್ಗಾಶ್ರೀ, ಚುನಾವಣೆ ವೀಕ್ಷಕರಾದ ಶ್ರೀ ಶಿವಕುಮಾರ್ ಉಪ ಕಾರ್ಯದರ್ಶಿ ZP, ತಹಶೀಲ್ದಾರ್ ಡಾ. ಮಲ್ಲಪ್ಪ. ಕೆ. ಯರಗೋಳ, ಚುನಾವಣೆ ಅಧಿಕಾರಿಗಳ ತಂಡ 21 ಮತಗಟ್ಟೆ ಗಳಿಗೆ ಭೇಟಿ ನೀಡಿ ಮತದಾನ ಶಾಂತಿ ರೀತಿಯಿಂದ ನಡೆಯುತ್ತಿರುವ ಬಗ್ಗೆ ಪರಿಶೀಲನೆ ಮಾಡಿದರು..
ಇಂದು ನಡೆಯುತ್ತಿರುವ ಪಟ್ಟಣ ಪಂಚಾಯತ್ ಚುನಾವಣೆ ಮತಗಟ್ಟೆಗಳ ಭೇಟಿಯಲ್ಲಿ ಕೈಗೊಂಡಿರುವ ಪೂರ್ವ ಸಿದ್ಧತೆ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದ್ದು ಮತದಾರರು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಶೇ 59% ಕ್ಕೂ ಹೆಚ್ಚು ಮತದಾನ ಆಗಿದ್ದು ಉತ್ಸಾಹದಿಂದ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಹೆಚ್ಚಿನ ಜನ ಮತದಾನ ಪ್ರಕ್ರಿಯಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಸಲಹೆ ನೀಡಿದರು..

