
ಪ್ರಬುದ್ಧ ಕರ್ನಾಟಕ ಭೀಮ ಸೇನೆಯ ರಾಜ್ಯಾಧ್ಯಕ್ಷರು ಯು. ಮುನಿರಾಜು ರವರು ರಾಜಕೀಯದ ವ್ಯವಸ್ಥೆಯ ಬಗ್ಗೆ ಕಿಡಿಕಾರಿದ್ದಾರೆ.
ಬಳ್ಳಾರಿ: ದಿನಾಂಕ 1/01/2026 ರಂದು ಅಧಿಕಾರ ಸ್ವೀಕರಿಸಿದ ಎಸ್.ಪಿ.ಪವನ್ ನಜ್ಜೂರ್ ರವರಿಗೆ ಜಿಲ್ಲೆಯ ಆಗುಹೋಗುಗಳನ್ನು ಅರಿಯಲು ಮೂರು ನಾಲ್ಕು ದಿನಗಳಾದರೂ ಬೇಕಾಗಿತ್ತು. ಆ ಗುಂಪು ಘರ್ಷಣೆಗೆ ಎಸ್. ಪಿ.ಯವರು ನೇರ ಹೊಣೆಯಲ್ಲ ಅಧಿಕಾರ ವಹಿಸಿಕೊಂಡ ಒಂದು ದಿನಕ್ಕೆ ಸಸ್ಪೆಂಡ್ ಮಾಡಬಾರದಿತ್ತು. ಎಸ್. ಪಿ.ಯವರ ಕೆಳದರ್ಜೆಯ ಅಧಿಕಾರಿಗಳಿಗೆ ಇದರ ಬಗ್ಗೆ ಅರಿವಿರಬೇಕಿತ್ತು.ಆದರೆ
ರಾಜಕೀಯ ಪ್ರೇರಿತ ಪುಂಡಾಟಕ್ಕೆ ಪ್ರಾಮಾಣಿಕ ಅಧಿಕಾರಿಗಳ ತಲೆದಂಡವಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ…
ಯಾವುದೇ ಕಡೆ ಏನೇ ಸಮಸ್ಯೆ ಆಗಲಿ ರಾಜಕೀಯ ವ್ಯವಸ್ಥೆ ಹೇಗಿದೆ ಅಂದರೆ ಮೊದಲು ಸಸ್ಪೆಂಡ್ ಮಾಡೋದು ಅಧಿಕಾರಿಗಳನ್ನ.ಎಂದು ಪ್ರಬುದ್ಧ ಕರ್ನಾಟಕ ಭೀಮ ಸೇನೆಯ ರಾಜ್ಯಾಧ್ಯಕ್ಷರು ಯು.ಮುನಿರಾಜು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


