ಸುದ್ದಿ

ನಮ್ಮ ಸಂಸ್ಕೃತಿ ಪರಂಪರೆ ಮತ್ತು ಹಬ್ಬಗಳ ಮಹತ್ವದ ಬಗ್ಗೆ ಶಾಲಾ ಮಕ್ಕಳಿಗೆ ತಿಳಿಸೋಣ:ಪ್ರೊ. ಅರಸೇಗೌಡ್ರು

Share It

ಸಂಕ್ರಾಂತಿ ಪ್ರಕೃತಿಯನ್ನು ಆರಾಧಿಸುವ ಹಬ್ಬ..!

ಜಕ್ಕಸಂದ್ರ ನಾರಾಯಣಪ್ಪ ಇಂಗ್ಲಿಷ್ ಹೈಸ್ಕೂಲ್ ನಲ್ಲಿ ದಿನಾಂಕ-14-01-2026 ರಂದು ಬುಧವಾರ ನಡೆದ ಮಕರ ಸಂಕ್ರಾಂತಿಯ ಹಬ್ಬದ ಪ್ರಯುಕ್ತ ನಮ್ಮ ಸಂಸ್ಕೃತಿ ಪರಂಪರೆಯ ಇರುವ ಹಬ್ಬಗಳ ಮಹತ್ವದ ಬಗ್ಗೆ ಶಾಲಾ ಮಕ್ಕಳಿಗೆ ತಿಳಿಸುವ ಸಲುವಾಗಿ ಕಾರ್ಯಕ್ರಮವನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ದೊಡ್ಡಬಳ್ಳಾಪುರ:ಪಾಲನ ಜೋಗಿಹಳ್ಳಿಯ ಜಕ್ಕಸಂದ್ರ ನಾರಾಯಣಪ್ಪ ಇಂಗ್ಲಿಷ್ ಹೈ ಸ್ಕೂಲ್ ನಲ್ಲಿ ಮಕರ ಸಂಕ್ರಾಂತಿಯ ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನಮ್ಮ ಸಂಸ್ಕೃತಿ ಪರಂಪರೆ ಹಬ್ಬಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ದಿನ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷತೆಯಲ್ಲಿ ನಮ್ಮ ಶಾಲೆಯ ಮುಖ್ಯ ಶಿಕ್ಷಕರ ಉಪಸ್ಥಿತಿಯಲ್ಲಿ ಆಚರಿಸಲಾಯಿತು. ನಮ್ಮ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸಮ್ಮುಖದಲ್ಲಿ ಈ ಹಬ್ಬದ ವಿಶೇಷತೆಗೆ ಸಂಬಂಧಪಟ್ಟ ವಸ್ತುಗಳ ಪ್ರದರ್ಶನ ಮತ್ತು ಧಾರ್ಮಿಕತೆಯಲ್ಲಿ ಅಡಗಿರುವ ವಾಸ್ತವ್ಯವನ್ನು ಹಾಡು ನೃತ್ಯ ಕಿರುಭಾಷಣಗಳ ಮೂಲಕ ತಿಳಿಸಲಾಯಿತು. ಗೋವಿನ ಪೂಜೆಯು ಸಹ ನೆರವೇರಿಸಲಾಯಿತು.

ಮಕರ ಸಂಕ್ರಾಂತಿ ಹಬ್ಬದ ಮಹತ್ವ. ನಮ್ಮ ದೇಶದ ಪ್ರಮುಖ ಕೃಷಿ ಹಬ್ಬಗಳಲ್ಲಿ ಒಂದಾಗಿದೆ.ಈ ಹಬ್ಬವನ್ನು ಶಾಲೆಗಳಲ್ಲಿ ಆಚರಿಸುವುದರಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನಮ್ಮ ಸಂಸ್ಕೃತಿ ಪರಂಪರೆ ಮತ್ತು ಹಬ್ಬಗಳ ಮಹತ್ವವನ್ನು ತಿಳಿಸುವಂತಾಗುತ್ತದೆ. ಎಂದು ಪ್ರೊ. ಅರಸೇಗೌಡರು ತಿಳಿಸಿದರು.

ಈ ಒಂದು ಕಾರ್ಯಕ್ರಮಕ್ಕೆ ನಮ್ಮ ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿ ವಿಜೃಂಭಣೆಯಿಂದ ಆಚರಿಸಿದರು.

ಸಂಕ್ರಾಂತಿಯು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ದಿನ ಇದು ಕತ್ತಲೆಯಿಂದ ಬೆಳಕಿನೆಡೆಗೆ ಪಯಣಿಸುವ ಸಂಕೇತ ರೈತರು ತಾವು ಬೆಳೆದ ಬೆಳೆಗಳನ್ನು ದೇವರಿಗೆ ಅರ್ಪಿಸಿ “ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು” ಎಂದು ಪ್ರೀತಿಯನ್ನು ಹಂಚಿಕೊಳ್ಳುವ ದಿನ ಈ ಮಕರ ಸಂಕ್ರಾಂತಿ ಹಬ್ಬ.