ಸುದ್ದಿ

ಶಿಕ್ಷಣಕ್ಕೆ ಮೊದಲನೇ ಆದ್ಯತೆ ನೀಡಿ ನಿವೃತ್ತ ಜಂಟಿ ನಿರ್ದೇಶಕರು: ಪದ್ಮರಾಜು.ಎಸ್.ಸಿ

Share It
ದೊಡ್ಡಬಳ್ಳಾಪುರ: ಪದ್ಮರಾಜು. ಎಸ್.ಸಿ.ನಿವೃತ್ತ ಜಂಟಿ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ:

ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಸರಿಯಾಗಿ ಸರ್ಕಾರ ವ್ಯವಸ್ಥೆ ಮಾಡಿಲ್ಲ ಸರ್ಕಾರಿ ಶಾಲೆಗಳಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ, ಹಿಂದುಳಿದ ವರ್ಗ ,ಅಲ್ಪಸಂಖ್ಯಾತರು, ಕಡು-ಬಡವರು ತುಂಬಾನೇ ಓದುತ್ತಿರುವುದು ಎಲ್ಲರಿಗೂ ಗೊತ್ತಿರುವಂತಹ ವಿಷಯ. ಶಾಲೆಗಳಲ್ಲಿ ಶಿಕ್ಷಣದ ಕೊರತೆ ಎದ್ದು ಕಾಣುತ್ತದೆ.ಕಾರಣ ಶಿಕ್ಷಕ ಶಿಕ್ಷಕಿಯರ ಕೊರತೆ, ಅಲ್ಲಿನ ಮೂಲಭೂತ ಸೌಕರ್ಯ ಕೊರತೆ ಆದ್ದರಿಂದ ಸಮಾಜದಲ್ಲಿ ಸಾಮಾಜಿಕವಾಗಿ ಕಡುಬಡ ಮಕ್ಕಳಿಗೆ ಶಿಕ್ಷಣದ ಬಗ್ಗೆ ಹೆಚ್ಚಿನದಾಗಿ ಅರಿವು ಮೂಡಿಸುವಂತಹ ಕೆಲಸ ಮಾಡೋಣ ಮಕ್ಕಳಿಗೆ ಬೇಕಾಗಿರುವಂತಹ ಪೆನ್ನು ಪುಸ್ತಕಗಳನ್ನ ಬ್ಯಾಗ್ ಗಳನ್ನು ಒದಗಿಸಿಕೊಡೋಣ ಅವರ ಊರುಗಳಿಗೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ ವಿದ್ಯಾಭ್ಯಾಸ ಮಾಡುವಂತಹ ಮಕ್ಕಳಿಗೆ ಸ್ಪಂದಿಸಿ ಕೆಲಸ ಮಾಡೋಣ ಎಂದು ಅರ್ಥಪೂರ್ಣವಾದಂತಹ ವಿಷಯವನ್ನು ಹೇಳಿದರು. ನಾನು ಶಿಕ್ಷಣಕ್ಕೆ ಮೊದಲನೇ ಆದ್ಯತೆ ನೀಡುವೆ ನನ್ನಿಂದ ಯಾವ ರೀತಿಯಾದರು ಕೆಲಸವನ್ನ ಮಾಡಿಸಿಕೊಳ್ಳಿ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ವಿದ್ಯಾವಂತರಾಗಿ ಬೆಳೆಯುವ ಮಕ್ಕಳಿಗೆ ನಾನು ಸಹಾಯ ಮಾಡಲು ಸಿದ್ಧ. ಎಂದು ಮಾನ್ಯ ನಿವೃತ್ತ ಜಂಟಿ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪದ್ಮಾವರಾಜು ಎಸ್ ಸಿ ರವರು ಪ್ರಬುದ್ಧ ಕರ್ನಾಟಕ ನ್ಯೂಸ್ 24 ಆಫೀಸ್ ಗೆ ಬಂದು ಹೇಳಿದ ರೀತಿ ಅರ್ಥಪೂರ್ಣವಾಗಿತ್ತು.ಪ್ರಬುದ್ಧ ಕರ್ನಾಟಕ ಭೀಮ ಸೇನೆಯು ಸಹ ಕೈಜೋಡಿಸಲು ಸಿದ್ಧರಾಗಿದ್ದೇವೆ ಧನ್ಯವಾದಗಳು ನಿವೃತ್ತ ಅಧಿಕಾರಿಗಳಿಗೆ ನಿಮ್ಮಂತಹ ಪ್ರಾಮಾಣಿಕ ನಿಷ್ಠಾವಂತ ಅಧಿಕಾರಿ ಈ ರೀತಿ ಕೆಲಸ ಮಾಡಿದ್ದಲ್ಲಿ ಕರ್ನಾಟಕ ಒಂದೇ ಅಂತ ಅಲ್ಲ ಇಡೀ ಭಾರತ ದೇಶವನ್ನೇ ಬದಲಾಯಿಸಬಹುದು.ಶಿಕ್ಷಣವು ಬದಲಾವಣೆಯ ಮೂಲವಾಗಿದೆ ಧನ್ಯವಾದಗಳು.ಸರ್..