
ದೊಡ್ಡಬಳ್ಳಾಪುರ: ಐಫೋನ್ ಫಾಕ್ಸನ್ ಮತ್ತು ಇತರ ಕಂಪನಿಗಳ ವಾಹನಗಳು ಅತಿ ವೇಗ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾರ್ಕಿಂಗ್ ನಿಂದ ಅಪಘಾತಗಳು ಸಂಭವಿಸುತ್ತಿವೆ ಕಡಿವಾಣ ಹಾಕಿ ಎಫ್ಐಆರ್ ದಾಖಲಿಸುವಂತೆ ಪ್ರಬುದ್ಧ ಕರ್ನಾಟಕ ಭೀಮಸೇನೆ ದೂರು.


ದೊಡ್ಡಬಳ್ಳಾಪುರ ತಾಲ್ಲೂಕು. ಐಪೋನ್, ಫಾಕ್ಸನ್ ಮತ್ತು ಬಾಶೆಟ್ಟಿಹಳ್ಳಿಯಲ್ಲಿರುವ ಹಲವಾರು ಫ್ಯಾಕ್ಟರಿಗಳಲ್ಲಿ ಸುಮಾರು ವಾಹನಗಳಿದ್ದು ಈ ಹಿಂದೆ ಕೆಲವು ವಾಹನಗಳಿಂದ ಅಪಘಾತವಾಗಿರುವುದು ತಮಗೆ ತಿಳಿದಿದೆ. ಆದರೆ ಈಗ ಎಷ್ಟೋ ವಾಹನಗಳಿಗೆ ಇನ್ಸೂರೆನ್ಸ್, ಎಫ್.ಸಿ ಇರುವುದಿಲ್ಲ ಎಂಬ ಮಾಹಿತಿ ಬಂದಿರುತ್ತದೆ. ಮುಖ್ಯವಾಗಿ ಇತ್ತೀಚಿನ ತಿಂಗಳುಗಳಿಂದ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಯುವತಿಯರು ಹೊರ ರಾಜ್ಯದಿಂದ ಬಂದು ಬಾಡಿಗೆ ಮನೆಗಳಲ್ಲಿ ವಾಸವಿದ್ದು, ಐ.ಪೋನ್ ಮತ್ತು ಪಾಕ್ಸನ್ ಕಂಪನಿಗಳಲ್ಲಿ ದಿನದ 24 ಗಂಟೆಗಳು ಸಹ ಕೆಲಸವನ್ನು ಮಾಡಿಸುತ್ತಿರುವುದು ಅಕ್ರಮ್ಯ ಅಪರಾಧ 24 ಗಂಟೆ ಕೆಲಸ ಮಾಡಲು ಕಾನೂನಿನಲ್ಲಿ ಅವಕಾಶ ಇದೆಯಾ, ತನಿಖೆ ನಡೆಸಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ನಿಲ್ಲಿಸಬೇಕೆಂದು ಮನವಿ ಮತ್ತು ಕರುನಾಡು, ಜಾಯವಿನ್ ಇನ್ನಿತರ ವಾಹನಗಳು ಅತಿಯಾದ ವೇಗದಿಂದ ಜನರು ಓಡಾಡಲು ಭಯ ಪಡುತ್ತಿದ್ದಾರೆ. ಆದ್ದರಿಂದ ಕೆಲ ತಿಂಗಳ ಹಿಂದೆ ಅಪಘಾತವಾಗಿ ಸಾವನ್ನಪ್ಪಿರುವುದು ತಮಗೆ ತಿಳಿದಿರುತ್ತದೆ. ಡ್ರೈವರ್‌ಗಳ ಅಜಾಗ್ರತೆಯಿಂದ ಅಪಘಾತಗಳು ಸಂಭವಿಸುತ್ತಿವೆ. ಮತ್ತು ಡ್ರೈವರ್‌ಗಳ ಡಿ.ಎಲ್ ಅನ್ನು ಪರಿಶೀಲಿಸಿ ಅವರಿಗೆ ವಿಶೇಷವಾಗಿ ಎಚ್ಚರಿಕೆಯನ್ನು ನೀಡಬೇಕು.
ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅದರಲ್ಲೂ ರಾಜ್ಯ ಹೆದ್ದಾರಿಗಳಲ್ಲಿ ಪಾರ್ಕಿಂಗ್‌ನ್ನು ಮಾಡುತ್ತಾರೆ. ಅದರಿಂದ ಅಲ್ಲಿ ಅಪಘಾತ ವಲಯವಾಗಿ ಸೃಷ್ಟಿಯಾಗಿದ್ದು, ಜನರ ಆಕ್ರೋಶಕ್ಕೆ ಸಹ ಕಾರಣವಾಗಿದೆ.ಮುಖ್ಯವಾಗಿ ಪಾಲನ ಜೋಗಿಹಳ್ಳಿ ರಾಜ್ಯ ಹೆದ್ದಾರಿಯಲ್ಲಿ ವಿಪರೀತ ಪಾರ್ಕಿಂಗ್ ಮಾಡುತ್ತಾರೆ. ಹಾಗಾಗಿ ದಯವಿಟ್ಟು ವಾಹನಗಳ ದಾಖಲಾತಿಗಳನ್ನು ಪರಿಗಣಿಸಿ ರಾಜ್ಯ ಹೆದ್ದಾರಿಯಲ್ಲಿ ಪಾರ್ಕಿಂಗ್ ಮಾಡದಿರುವಂತೆ ಎಚ್ಚರಿಕೆಯನ್ನು ಕೊಟ್ಟು ವೇಗದ ಮಿತಿಯನ್ನು ಕಡಿತಗೊಳಿಸಬೇಕೆಂದು ಮನವಿ. ಒಂದು ವೇಳೆ ನಿಯಮಗಳನ್ನು ಉಲ್ಲಂಘನೆ ಮಾಡಿ ವೇಗದಿಂದ ಶಾಲಾ ಮಕ್ಕಳಿಗಾಗಲಿ ವಿದ್ಯಾರ್ಥಿ/ನಿಯರಿಗಾಗಲಿ, ಸಾರ್ವಜನಿಕರಿಗಾಗಲಿ ತೊಂದರೆಯಾದರೆ ಆ ಕಂಪನಿಯ ಲೈಸೆನ್ಸನ್ನು ರದ್ದುಗೊಳಿಸಿ ಎಫ್ಐಆರ್ ದಾಖಲಿಸಿ ಕಂಪನಿಯನ್ನು ಮುಚ್ಚಿಸಬೇಕು. ಒಂದು ವೇಳೆ ಸಂಬಂಧಪಟ್ಟ ಅಧಿಕಾರಿಗಳು ಲೈಸೆನ್ಸನ್ನು ರದ್ದುಗೊಳಿಸದಿದ್ದಲ್ಲಿ ಪ್ರಬುದ್ಧ ಕರ್ನಾಟಕ ಭೀಮಸೇನೆ (ರಿ) ಬೃಹತ್ ಮಟ್ಟದಲ್ಲಿ ಹೋರಾಟವನ್ನು ಮಾಡುತ್ತೇವೆ.ಎಂದು ಕಂಪನಿಯ ಮಾಲೀಕರಿಗೆ ಹಾಗೂ ವಾಹನಗಳ ಮಾಲೀಕರಿಗೆ ಎಚ್ಚರಿಕೆಯನ್ನು ನೀಡಿದೆ.ನಂತರ
ಮಾನ್ಯ ಡಿ.ವೈ.ಎಸ್ ಪಿ. ರವಿ ರವರು ಮನವಿಯನ್ನ ಸ್ವೀಕರಿಸಿ ಕೂಡಲೇ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಥಳದಲ್ಲಿ ಆ ವಾಹನಗಳ ಮಾಲೀಕರಿಗೆ ಡ್ರೈವರ್ ಗಳಿಗೆ ಕಂಪನಿಯವರಿಗೆ ಖಡಕ್ಕಾಗಿ ಎಚ್ಚರಿಕೆಯನ್ನು ನೀಡಿದರು.
ಡಿವೈಎಸ್ಪಿ. ರವಿ ರವರಿಗೆ ಪ್ರಬುದ್ಧ ಕರ್ನಾಟಕ ಭೀಮಸೇನೆ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಜನತೆಯಿಂದ ಅಭಿನಂದನೆಗಳು.


