ಸುದ್ದಿ

ಶಿಕ್ಷಣ ಹಾಗೂ ಸಾಧನೆಗಳ ಕಡೆ ಗಮನಹರಿಸಿ ಇನ್ಸ್ ಪೆಕ್ಟರ್:ಡಾ!!ಎಂ.ಬಿ.ನವೀನ್ ಕುಮಾರ್

Share It

ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವಂತಹ ದೌರ್ಜನ್ಯ,ಅತ್ಯಾಚಾರ,ಹತ್ಯೆ ಮತ್ತು ಮಾದಕ ವಸ್ತುವಿನ ಬಗ್ಗೆ ಜಾಗೃತಿ ಸಭೆ..

ಜಕ್ಕಸಂದ್ರ ನಾರಾಯಣಪ್ಪ ಇಂಗ್ಲೀಷ್ ಹೈ ಸ್ಕೂಲ್ ವತಿಯಿಂದ ಜುಲೈ 30 ರಂದು ಆಯೋಜಿಸಿದ್ದ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿಶೇಷವಾಗಿ ಮಾದಕ ವಸ್ತುವಿನ ಬಗ್ಗೆ ಹರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಇದೇ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ನವೀನ್ ಕುಮಾರ್ ರವರನ್ನು ವಿಶೇಷವಾಗಿ ಆಹ್ವಾನಿಸಿದ್ದರು ಇನ್ಸ್ಪೆಕ್ಟರ್ ರವರು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಮಾಜದಲ್ಲಿ ನಡೆಯುತ್ತಿರುವಂತಹ ದೌರ್ಜನ್ಯದ ಬಗ್ಗೆ ಮಾದಕ ದ್ರವ್ಯ ವಸ್ತುವಿನ ಬಗ್ಗೆ ಬಹಳ ಸ್ಪಷ್ಟತೆಯಿಂದ ವಿವರಿಸಿ ಹೇಳಿದರು ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ 15,16,17 ವರ್ಷದ ಹೆಣ್ಣು ಮಕ್ಕಳು ಪುಂಡ ಪೋಕಿರಿಗಳಿಗೆ ಬಲಿಯಾಗುತ್ತಿರುವುದು.ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೆಸ್ ಸಹ ಅತಿ ಹೆಚ್ಚಿನದಾಗಿ ಆಗ್ತಿದೆ ಇಂತಹ ವಿಷಯಗಳು ತಮ್ಮ ಗಮನಕ್ಕೆ ಇರಲಿ ಯಾರು ಸಹ ಪೊಕರಿಗಳಿಗೆ ಬಲಿಯಾಗದೆ “ಒಳ್ಳೆಯ ಶಿಕ್ಷಣವನ್ನು ಪಡೆದು ಸಾಧನೆ ಕಡೆ ಗಮನಹರಿಸಿ.” ಶಾಲಾ ಕಾಲೇಜಿನ ಅಕ್ಕಪಕ್ಕದಲ್ಲಿ ಅನುಮಾನಾಸ್ಪದವಾಗಿ ಯಾರಾದರು ಕಂಡುಬಂದರೆ ತಕ್ಷಣ ಶಿಕ್ಷಕರಿಗೆ ತಿಳಿಸಿ ಯಾರಾದರೂ ಚಾಕ್ಲೇಟ್ ಮೊಬೈಲ್ಸ್ ಕೊಟ್ಟರೆ ತೆಗೆದುಕೊಳ್ಳಬೇಡಿ ಎಂದು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ತಿಳಿಸಿದರು.ಬಹಳ ಮುಖ್ಯವಾಗಿ ಶಿಕ್ಷಕರು ಶಾಲಾ ಮಕ್ಕಳ ಮೇಲೆ ಗಮನವಿರಬೇಕು ಎಂದು ಶಿಕ್ಷಕರಿಗೂ ಸಹ ಕಿವಿ ಮಾತನ್ನು ಹೇಳಿದರು.

ವಿಷಯಗಳು ತಿಳಿದುಕೊಳ್ಳಿ ನೀವಿನ್ನು ಚಿಕ್ಕಮಕ್ಕಳು ಸಾಕಷ್ಟು ಸಾಧಿಸೋದು ಇದೆ ಶಿಕ್ಷಣದ ಕಡೆ ಗಮನ ಹರಿಸಿ ಒಳ್ಳೆಯ ವಿದ್ಯಾರ್ಥಿಗಳಾಗಿ ಮಾರಕವಾದoತಹ ಚಟಗಳಿಂದ ದೂರವಿರಿ ನಿಮ್ಮ ತಂದೆ ತಾಯಿಗಳಿಗೂ ಸಹ ಬುದ್ಧಿ ಹೇಳುವಂತಹ ಬುದ್ದಿವಂತರಾಗಿ ನೀವಿನ್ನು ಚಿಕ್ಕ ಮಕ್ಕಳು ಎಷ್ಟೋ ವಿಷಯಗಳು ನಿಮ್ಮ ಬಳಿ ಹೇಳುವುದಕ್ಕೆ ಆಗುವುದಿಲ್ಲ ಇಷ್ಟು ಸಾಕು ದೊಡ್ಡ ದೊಡ್ಡ ವಿಷಯಗಳು ಬೇಡ. ಎಂದು ಸ್ಪಷ್ಟವಾಗಿ ಶಾಲಾ ಮಕ್ಕಳಿಗೆ ವಿಷಯವನ್ನು ವಿವರಿಸಿದ ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ನವೀನ್ ಕುಮಾರ್