
1955 ರ ಪ್ರಕಾರ ಮೊದಲ ಹೆಂಡತಿ ಇರುವಾಗಲೇ ವಿಚ್ಛೇದನವಿಲ್ಲದೆ ಎರಡನೇ ಮದುವೆ ಯಾಗುವುದು ಕಾನೂನು ಬಾಹಿರ ಅಪರಾಧವಾಗಿದೆ!!
ಮದುವೆಯ ಪವಿತ್ರ ಬಂಧ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದು ಬಲು ವಿಷಾದವಾಗಿದೆ.ಅದರಂತೆ ಗೌರಿಬಿದನೂರಿನ ಶಿಲ್ಪ ಮತ್ತು ರಘು ಎಂಬುವರು 2014ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು.ಅವರ ಅನ್ಯೋನ್ಯತೆಗೆ ಎರಡು ಗಂಡು ಮಕ್ಕಳಾದವು. ಪರಸ್ಪರ ಒಪ್ಪಿಗೆ ನಂತರ LTO ಆಪರೇಷನ್ ಮಾಡಿಸಿಕೊಂಡಿದ್ದರು. ಕಾಲ ನಂತರ ಒಂದು ಮಗು ಸಾವನ್ನಪ್ಪಿತು. ಇದರಿಂದ ರಘುವಿಗೆ ಮತ್ತೊಂದು ಮಗುವಿಗೋಸ್ಕರ ಹಂಬಲ ಹೆಚ್ಚಾಗಿ, ರಹಸ್ಯವಾಗಿ ಕಾವ್ಯ ಎಂಬ ಮಹಿಳೆಯ ಜೊತೆ ಅನೈತಿಕ ಸಂಬಂಧವನ್ನು ಹೊಂದಿದ್ದ. ಈ ವಿಷಯ ತಿಳಿದ ಶಿಲ್ಪ ಅದಕ್ಕೆ ವಿರೋಧ ಮಾಡಿ ರಘುವಿನ ಕುಟುಂಬದವರಿಗೆ ತಿಳಿಸುತ್ತಾಳೆ. ಕುಟುಂಬದವರು ಯಾವುದನ್ನು ಆಲಿಸದೆ ರಘುವಿನ ನಿರ್ಧಾರವನ್ನು ಸರಿ ಎನ್ನುವಂತೆ ವರ್ತಿಸುತ್ತಾರೆ. ನಂತರ ಶಿಲ್ಪಾರವರ ಕುಟುಂಬದವರ ಮೇಲೆ ಮಾರಣಾಂತಿಕವಾಗಿ ಹಲ್ಲೆಯೂ ಸಹ ರಘು ಎಂಬುವರು ಮತ್ತು ಅವರ ತಂದೆ ಮಾಡಿಸಿರುತ್ತಾರೆ. ಕಾವ್ಯ ತಂದೆಗೆ ವಿಷಯವು ತಿಳಿದಾಗ ಇದು ಮತ್ತೆ ಪುನರಾವರ್ತನೆ ಆಗುವುದಿಲ್ಲ ಎಂಬ ಭರವಸೆ ನೀಡಿದರೂ, ಅದನ್ನವರು ಉಳಿಸಿಕೊಳ್ಳಲಿಲ್ಲ. ಈಗ ಅವರೇ ಮಗಳು ಕಾಣುತ್ತಿಲ್ಲವೆಂಬ ದೊಡ್ಡಬಳ್ಳಾಪುರದ ಮಹಿಳಾ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು.ಈಗಾಗಲೇ ಶಿಲ್ಪ ತನ್ನ ಪತಿಯ ವಿರುದ್ಧ ವರದಕ್ಷಿಣೆ ದೂರನು ಗೌರಿಬಿದನೂರು ಪೊಲೀಸ್ ಠಾಣೆಯಲ್ಲಿ ನೀಡಿದ್ದು ರಘು ಬೇಲ್ ಮೂಲಕ ಹೊರ ಬಂದಿರುತ್ತಾನೆ. ನಂತರ ಕಾವ್ಯಳನ್ನು ಸಹ ಎರಡನೇ ಮದುವೆಯಾಗಿದ್ದಾನೆ.ತಂದೆ ತಾಯಿಯ ಆಸೆರೆ ಇಲ್ಲದ ಶಿಲ್ಪಾಳಿಗೆ ಸಾಕಷ್ಟು ಸಾಲದ ಹೊರೆಯನ್ನು ಹೊರೆಸಿದಾನೆ. ಜೊತೆಗೆ ಶಿಲ್ಪ ಮತ್ತು ಮಗುವನ್ನು ತಿರಸ್ಕರಿಸುವುದು ಅಪಾರ ನೋವುಂಟು ಮಾಡಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ನಮಗೆ ನನ್ನ ಪತಿಯ ಅಗತ್ಯವಿದೆ. ಹಾಗಾಗಿ ನಮಗೆ ನ್ಯಾಯ ಕೊಡಿಸಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.
ಹಿಂದೂ ವಿವಾಹ ಕಾಯ್ದೆ 1955 ರ ಪ್ರಕಾರ ಮೊದಲ ಹೆಂಡತಿ ಇರುವಾಗಲೇ ವಿಚ್ಛೇದನವಿಲ್ಲದೆ ಎರಡನೇ ಮದುವೆಯಾಗುವುದು ಕಾನೂನು ಬಾಹಿರ ಅಪರಾಧವಾಗಿದೆ.


