ಸುದ್ದಿ

ಎಂ.ಆರ್.ಪಿ ಬೋರ್ಡ್ ಗಳಿಗೆ ಕತ್ತರಿ ಹೊರರಾಜ್ಯದಿಂದ ಬರುತ್ತಿರುವ ಸೇಂದಿಗೆ ಕಡಿವಾಣ ಹಳ್ಳಿಗಳ ಭಾಗದಲ್ಲಿ ಸರಬರಾಜು ಆಗುತ್ತಿರುವ ಮಧ್ಯ ಮಾರಾಟಕ್ಕೆ ಬ್ರೇಕ್ ಇಲ್ಲವಾದಲ್ಲಿ ಎಫ್ಐಆರ್ ದಾಖಲು

Share It

ಅಬಕಾರಿ ಇಲಾಖೆ ದೊಡ್ಡಬಳ್ಳಾಪುರ:
ಇತ್ತೀಚಿನ ದಿನಗಳಲ್ಲಿ ಕುಡಿತದಿಂದ ಎಷ್ಟು ಜನರ ಕುಟುಂಬಗಳು ಹಾಳಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್ ರಾಘವೇಂದ್ರರವರು ಕ್ರಮಗಳನ್ನು ಕಾರ್ಯಗತವಾಗಿ ನೇರವೇರಿಸಲು ಮುಂದಾಗಿದ್ದಾರೆ.

CL-7 ಬಾರ್ ಅಂಡ್ ರೆಸ್ಟೋರೆಂಟ್ ಗಳ MRP ಬೋರ್ಡ್ ಗಳನ್ನು ತೆರವುಗೊಳಿಸಿದ್ದಾರೆ.ನಿಯಮದ ಪ್ರಕಾರ 100 ಮೀಟರ್ ಅಂತರದಲ್ಲಿ ಯಾವುದೇ ರೀತಿಯ ಶಾಲಾ ಕಾಲೇಜು, ದೇವಸ್ಥಾನ, ಚರ್ಚ್, ಮಸೀದಿಗಳು, ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ವಾಸ ಇರುವ ಕಡೆ ಬಾರ್ ಗಳನ್ನು ತೆರೆಯುವಂತಿಲ್ಲ. ಎಂದು ಅರ್ಜಿ ಸಲ್ಲಿಸುತ್ತಿರುವ ಮಾಲೀಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.ಸುಮಾರು ವರ್ಷಗಳಿಂದ ಹಳ್ಳಿಗಳ ಭಾಗದಲ್ಲಿ ಅತಿ ಹೆಚ್ಚು ಅಂಗಡಿಗಳಲ್ಲಿ ಮಧ್ಯ ಮಾರಾಟವಾಗುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕು ಎಂದು ವಿಶೇಷವಾಗಿ ಸರಬರಾಜು ಮಾಡುತ್ತಿರುವ ಮಧ್ಯದ ಅಂಗಡಿಗೆ ಎಚ್ಚರಿಸಿದ್ದರು, ಒಂದು ವೇಳೆ ಕಡಿಮೆ ಆಗದಿದ್ದಲ್ಲಿ ನೇರವಾಗಿ F I R ದಾಖಲು ಮಾಡಲಾಗುತ್ತದೆ. ಎಂದು ಎಚ್ಚರಿಕೆಯನ್ನು ಸಹ ನೀಡಿದ್ದಾರೆ.ಯುವಕರು ಗಾಂಜಾ, ಡ್ರಗ್ಸ್, ಇನ್ನಿತರ ಮಾದಕ ದ್ರವ್ಯಗಳನ್ನು ವಸ್ತುವನ್ನು ತೆಗೆದುಕೊಳ್ಳುತ್ತಿರುವ ಮತ್ತು ಮಾರಾಟ ಮಾಡುವವರು ಯಾರಾದರೂ ಕಂಡು ಬಂದರೆ ತಕ್ಷಣ ನಮಗೆ ತಿಳಿಸಿ ನೇರವಾಗಿ F I R ದಾಖಲೆ ಮಾಡುತ್ತೇವೆ. ಎಂದು ಇನ್ಸ್ ಪೆಕ್ಟರ್ ರಾಘವೇಂದ್ರ ಅವರು ತಿಳಿಸಿದ್ದಾರೆ. ಹೊರ ರಾಜ್ಯದಿಂದ ರೈಲುಗಳಲ್ಲಿ ಮತ್ತು ಇನ್ನಿತರದ ಮೂಲಕ ಸೇಂದಿ ಬರುತ್ತಿದೆ ಎಂದು ತಿಳಿದು ಸುಮಾರು ಪ್ರಕರಣಗಳನ್ನು ದಾಖಲು ಮಾಡಿ ಅದಕ್ಕೆ ಕಡಿವಾಣ ಹಾಕಿದ್ದೇವೆ. ಎಂದು ದೊಡ್ಬಳ್ಳಾಪುರದ ಅಬಕಾರಿ ನಿರೀಕ್ಷಕರಾದ ರಾಘವೇಂದ್ರರವರು ತಿಳಿಸಿದ್ದಾರೆ.

oplus_136314880