ಸುದ್ದಿ

ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರು ತಲೆ ಕೆಡಿಸಿಕೊಳ್ಳದ ಅಧಿಕಾರಿ ಸಬ್ ರಿಜಿಸ್ಟರ್ ಸತೀಶ್.!

Share It

ಭೂಗಳ್ಳರಿಗೆ ನ್ಯಾಯಾಲಯದ ಭಯವಿಲ್ಲವೇ…?
ಭೂ ಮಾಫಿಯಾದಿಂದ ಕಂಗೆಟ್ಟ ರೈತರು..?ಅಧಿಕಾರದಲ್ಲಿರುವವರು ಕರ್ತವ್ಯ ಮರೆತರೆ..?

ದೊಡ್ಡಬಳ್ಳಾಪುರ ಕಸಬಾ ಹೋಬಳಿ ಆಲಹಳ್ಳಿ ಗ್ರಾಮದ ಸರ್ವೆ ನಂಬರ್ 27/1ರಲ್ಲಿ ಎರಡು ಎಕರೆ 19 ಗುಂಟೆ ಜಮೀನು ದೊಡ್ಡಬಳ್ಳಾಪುರದ ನ್ಯಾಯಾಲಯದಲ್ಲಿ OS/NO/471/2012 ಮತ್ತು OS/NO/501/2015 ತಾತ್ಕಾಲಿಕ ತಡೆಯಾಜ್ಞೆ ಹಾಗೂ ಉಪನೊಂದಣಾಧಿಕಾರಿ ರವರ ಕಚೇರಿ ಬುಕ್ ನಲ್ಲಿ ಹಾಗೂ ಪಹಣಿಯಲ್ಲಿ ಆದೇಶ ನೊಂದವಣಿ ಇದ್ದರೂ ಸಹ ಕಾನೂನು ಬಾಹಿರವಾಗಿ ರಿಜಿಸ್ಟರ್ ಮಾಡಿರುವುದು ನೊಂದ ರೈತರ ಆಕ್ರೋಶಕ್ಕೆ ಕಾರಣವಾಗಿದೆ.ಈ ವಿಚಾರವಾಗಿ ದೊಡ್ಡಬಳ್ಳಾಪುರದ ಸಬ್ ರಿಜಿಸ್ಟರ್ ಆಫೀಸರ್ ಸತೀಶ್ ರವರನ್ನು ಕೇಳಿದ್ದಾರೆ.ಒತ್ತಡಕ್ಕೆ ಮಣಿದು ರಿಜಿಸ್ಟರ್ ಮಾಡಿದೆ ಎಂದರಂತೆ ಎಂದು ಬೇಸರ ವ್ಯಕ್ತಪಡಿಸಿದ ರೈತರು.

LRF.CR.18/2000-2001 ದೊಡ್ಡಬಳ್ಳಾಪುರ ಮಾನ್ಯ ತಹಸೀಲ್ದಾರ್ ರವರ ಆದೇಶದಂತೆ 8 ಜನ ರೈತರಿಗೆ 12 ಗುಂಟೆಯಂತೆ ಜಮೀನು ಮಂಜೂರು ಆಗಿದ್ದು ಇದನ್ನು ಕಬಳಿಸಲು ಭೂ ಮಾಫಿಯಾದ S.A ನಾಗರಾಜು ಬೊಗಸ್ ಜಿಪಿಎ ಹೋಲ್ಡರ್ ಹಾಗೂ ಮತ್ತೊಬ್ಬ ಸುರೇಶ್ ಬಿನ್ ಪಿಳ್ಳಪ್ಪ ಎಂಬುವರ ಹೆಸರಿನಲ್ಲಿ ಕಾನೂನುಬಾಹಿರವಾಗಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಸಿಕೊಂಡು ನಕಲಿ ಪ್ರತಾಪ್ ವಾಸುದೇವ್ ಮುಖರ್ಜಿ ಎಂಬ ವ್ಯಕ್ತಿಯನ್ನು ಸೃಷ್ಟಿಸಿಕೊಂಡು ಅಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸಿ ದೊಡ್ಡಬಳ್ಳಾಪುರದ ಸಬ್ ರಿಜಿಸ್ಟರ್ ಆಫೀಸರ್ ಸತೀಶ್ ರವರು ಭೂ ಮಾಫಿಯಾಗಳ ಜೊತೆ ಶಾಮಿಲಾಗಿ ರಿಜಿಸ್ಟರ್ ಮಾಡಿರುತ್ತಾರೆ.

ಮಾನ್ಯ ತಹಸೀಲ್ದಾರ್ ರವರಿಗೆ ಖಾತೆ ವಜಾ ಮಾಡಲು ರೈತರು ದಾಖಲೆಗಳ ಮುಖಾಂತರ ಅರ್ಜಿ ಮತ್ತು ದೂರು ಸಲ್ಲಿಸಿದ್ದು ಇದುವರೆಗೂ ಯಾವುದೇ ಸೂಕ್ತ ಕ್ರಮ ಜರುಗಿಸಿರುವುದಿಲ್ಲ.ಇದು ಅನುಮಾನಾಸ್ಪದಕ್ಕೆ ಕಾರಣವಾಗಿದೆ ಎಂದು ರೈತರು ತಿಳಿಸಿದ್ದಾರೆ.

ಈ ಹಿಂದೆ ರೈತರು ನೀಡಿದ ಅರ್ಜಿಯನ್ನು ಸ್ವೀಕರಿಸಿದ ದೊಡ್ಡಬಳ್ಳಾಪುರದ ದಂಡಾಧಿಕಾರಿರವರು ವಿಷಯ ತಿಳಿದ ಕೂಡಲೇ R.I ಸುಂದರ್ ರಾಜ್ ಅವರನ್ನು ನೆಲಮಂಗಲ ತಾಲೂಕಿಗೆ ವರ್ಗಾವಣೆಗೊಳಿಸಿರುತ್ತಾರೆ

ಮಾನ್ಯ ಗೌರವಾನ್ವಿತ ಕರ್ನಾಟಕ ಲೋಕಾಯುಕ್ತದಲ್ಲಿ ದೊಡ್ಡಬಳ್ಳಾಪುರ ಸಬ್ ರಿಜಿಸ್ಟರ್ ಸತೀಶ್ ರವರ ಹಾಗೂ ಜಿಲ್ಲಾ ನೊಂದಣಾಧಿಕಾರಿ ರವರ ಮೇಲೆ ಲೋಕಾಯುಕ್ತದಲ್ಲೂ ಕಂಪ್ಲೇಂಟ್ ಆಗಿದೆ.ಕಂಪ್ಲೇಂಟ್ ನಂಬರ್ COMPT/UPLOK/BD/1115/2025 ಬೆಂಗಳೂರು(R) UPLOK-2 ಹೀಗಿದೆ ಎಂದಿದ್ದಾರೆ ರೈತರು.

ಇನ್ನು ಎಷ್ಟು ವಿಷಯಗಳು ಉಪನೋಂದಣಾಧಿಕಾರಿಗಳ ಮೇಲೆ ಕೆಲವರು ದೂರ್ ಇರುವುದು ತಿಳಿದು ಬಂದಿದೆ.ಎಷ್ಟೋ ಪ್ರಕರಣಗಳು ಮೂಲೆ ಗುಂಪಾಗಿ ಉಳಿದಿವೆ.

ಅರೇಹಳ್ಳಿ ಗುಡ್ಡದಹಳ್ಳಿ ಸರ್ವೆ ನಂ 58/4 ರಲ್ಲಿ 2 ಎಕರೆ ಮತ್ತು ಅರೇಹಳ್ಳಿ ಗುಡ್ಡದಹಳ್ಳಿಯಲ್ಲಿ ಸರ್ವೆ ನಂ 159 ರಲ್ಲಿ 39 ಗುಂಟೆ ಜಮೀನಿನ ವಿಚಾರವಾಗಿ ಮುಂದಿನ ದಿನಗಳಲ್ಲಿ ನಿಮ್ಮ ಮುಂದೆ ಸಂಕ್ಷಿಪ್ತ ಮಾಹಿತಿಯೊಂದಿಗೆ ಪ್ರಬುದ್ಧ ಕರ್ನಾಟಕ ನ್ಯೂಸ್ 24 ನಲ್ಲಿ ವೀಕ್ಷಿಸಿ.

ನಮ್ಮ ಪ್ರಶ್ನೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ಸಹ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ರಿಜಿಸ್ಟರ್ ಮಾಡಬಹುದಾ ಅಷ್ಟೇ…?