ಸುದ್ದಿ

ಯುವಕರೇ:ಡ್ರಗ್ಸ್ ಗಾಂಜಾ ಮತ್ತು ಮಾದಕ ದ್ರವ್ಯವಸ್ತುಗಳಿಗೆ ಕಡಿವಾಣ ಹಾಕಿ ಇಲ್ಲವಾದಲ್ಲಿ ಎಫ್. .ಐ.ಆರ್.ದಾಖಲು ಖಡಕ್ಕಾಗಿ ಎಚ್ಚರಿಕೆ ಕೊಟ್ಟ ದೊಡ್ಡಬಳ್ಳಾಪುರ ಗ್ರಾಮಾಂತರ ಇನ್ಸ್ ಪೆಕ್ಟರ್:ಸಾಧಿಕ್ ಪಾಷಾ

Share It

ಪೆಡ್ಲರ್ಸ್ ಗಳೇ ನಮಗೆ ಟಾರ್ಗೆಟ್!!

ಕರ್ನಾಟಕ ರಾಜ್ಯದಲ್ಲೂ ಹಾಗೂ ಬೆಂಗಳೂರಿನಂತಹ ನಗರದಲ್ಲೂ ಅಲ್ಲದೆ ದೊಡ್ಡಬಳ್ಳಾಪುರದಲ್ಲಿ ಇತ್ತೀಚಿನ ದಿನಗಳಿಂದ ಅತಿ ವೇಗವಾಗಿ ಯುವಕರೇ ಡ್ರಗ್ಸ್ ಗಾಂಜಾ ಅಂತಹ ಇನ್ನಿತರ ಮಾದಕ ದ್ರವ್ಯ ವಸ್ತುಗಳಂತಹ ಸೇವನೆಯಿಂದ ಬಲಿಯಾಗುತ್ತಿದ್ದಾರೆ.

ನಮ್ಮ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಕೆಲವು 10-15 ದಿನಗಳಿಂದ ಸುಮಾರು ಎಂಟು ಹತ್ತು ಪ್ರಕರಣಗಳನ್ನು ದಾಖಲಿಸಿದ್ದೇವೆ. ಇನ್ನೂ ಹೆಚ್ಚಿನ ಮಾಹಿತಿಯೂ ನಮಗೆ ಬೇಕಾಗಿರುವುದರಿಂದ ಅಕ್ಕಪಕ್ಕದ ಜನರು ಸಾರ್ವಜನಿಕರು ಅನುಮಾನಸ್ಪದವಾಗಿ ಯಾರಾದರೂ ಯುವಕರು ಕಂಡು ಬಂದರೆ ದಯವಿಟ್ಟು ನಮ್ಮ ಪೊಲೀಸ್ ಠಾಣೆಯ ನಂಬರ್ ಗಾಗಿಲಿ ಹಾಗೂ112 ಆಗಲಿ ಕರೆ ಮಾಡಿ ಮಾಹಿತಿ ನೀಡಿ ಎಂದು ಇನ್ಸ್ ಪೆಕ್ಟರ್ ಸಾದಿಕ್ ಪಾಷರವರು ತಿಳಿಸಿದರು.ನಂತರ ಮಾತನಾಡಿ

ಯುವಕರಿಗೆ: ಬದಲಾಗುವ ಸೂಚನೆಯನ್ನು ಮತ್ತು ಎಚ್ಚರಿಕೆಯನ್ನು ಹೇಳಿದ್ದಾರೆ. ಅನುಮಾನಸ್ಪಾವಾಗಿ ಯಾರಾದರೂ ಕಂಡರೆ ಅಂತಹವರನ್ನು ಮೆಡಿಕಲ್ ಚೆಕಪ್ ಮಾಡಿಸಿ ನಂತರ ಗಾಂಜಾ ಸೇವನೆ ಮಾಡಿದ್ದಾರೆ ಎಂದು ದೃಢಪಟ್ಟರೆ ಅಂತವರ ಮೇಲೆ ಕ್ರಮ ಜರುಗಿಸಿ ನ್ಯಾಯಕ್ಕೆ ಹಾಜರಿ ಪಡಿಸುತ್ತೇವೆ ಎಂದು ಎಚ್ಚರಿಸಿದರು. ಕಿವಿ ಮಾತು: ಒಬ್ಬ ಯುವಕ ಇನ್ನೊಬ್ಬ ಯುವಕನಿಗೆ ಇದನ್ನು ಸೇವಿಸು ಚೆನ್ನಾಗಿರುತ್ತೆ ಎಂದಾಗ ದಯವಿಟ್ಟು ಸೇವನೆ ಮಾಡಬೇಡಿ ಒಂದು ಸಲ ಸೇವಿಸಿದರೆ ನೀವು ಮತ್ತೆ ಮತ್ತೆ ಅದನ್ನು ಸೇವಿಸಬೇಕೆನಿಸುತ್ತದೆ ಅಷ್ಟು ಕ್ರೂರವಾದಂತಹ ಮಾದಕ ದ್ರವ್ಯ ಆಗಿರುತ್ತದೆ. ನೆನಪಿನಲ್ಲಿರಲಿ.

ಡ್ರಗ್ಸ್ ಗಾಂಜಾ ಇನ್ನಿತರ ಮಾದಕ ದ್ರವ್ಯ ವಸ್ತುಗಳು ಹೊರ ರಾಜ್ಯದಿಂದ ಬರುತ್ತಿದೆ ಎಂದು ನಮಗೆ ಮಾಹಿತಿ ಬಂದಿದೆ.ಇದನ್ನ ಯಾರು ಸರಬರಾಜು ಮಾಡುತ್ತಿದ್ದಾರೆ. ಅವರಿಗಾಗಿ ವಿಶೇಷವಾಗಿ ನಮ್ಮ ತಂಡ ಬಲೆ ಬೀಸಿದೆ ಆದಷ್ಟು ಬೇಗ ಹಿಡಿಯುತ್ತೇವೆ.

“ಶಾಲಾ-ಕಾಲೇಜುಗಳೇ ಪೆಡ್ಲರ್ಸ್ ಟಾರ್ಗೆಟ್ ಆಗಿದೆ”

ಯುವಕರೇ ಬದಲಾಗುವ ಚಾನ್ಸಸ್ ಇದೆ, ಬದಲಾಗಿ ಇಲ್ಲವಾದರೆ ಎಫ್ ಐ ಆರ್ ದಾಖಲಿಸುತ್ತೇವೆ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ

ದೊಡ್ಡಬಳ್ಳಾಪುರ ಜನತೆಯರಲ್ಲಿ ನನ್ನದೊಂದು ಮನವಿ ಜಾಗೃತರಾಗಿ ನಮಗೆ ಮಾಹಿತಿಯನ್ನು ನೀಡಿ ಯುವಕರನ್ನು ಆ ದುಶ್ಚಟಗಳಿಂದ ಹಾಗೂ ಅಪರಾಧ ಚಟುವಟಿಕೆಗಳಿಂದ ದೂರ ಮಾಡೋಣ ಒಳ್ಳೆಯ ಆರೋಗ್ಯವಂತರಾಗಿ ಸಮಾಜದಲ್ಲಿ ಬದುಕುವುದಕ್ಕೆ ಅವಕಾಶ ಕಲ್ಪಿಸಿ ಕೊಡೋಣ ಎಂದು ವಿಶೇಷವಾಗಿ ಸಾರ್ವಜನಿಕರಿಗೆ ಹೇಳಿದರು.