ಸುದ್ದಿ

ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಗರ್ಜಿಸಲೇಬೇಕು ಇನ್ಸ್ಪೆಕ್ಟರ್ ನವೀನ್ ಕುಮಾರ್ ಹಾಗೂ ಅಮರೇಶ್ ಗೌಡ್ರು

Share It

ಸಂವಿಧಾನ ಶಿಲ್ಪಿ ಭಾರತ ರತ್ನ ಬಾಬಾ ಸಾಹೇಬ್ ಡಾಕ್ಟರ್// ಬಿ.ಆರ್. ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆಯನ್ನು ವಿಶ್ವದಾದ್ಯಂತ ಬಹಳ ವಿಜೃಂಭಣೆಯಿಂದ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಆಚರಣೆ ಮಾಡುತ್ತಿದ್ದಾರೆ.

*ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು*

ಇಂದಿನ ಯುವ ಪೀಳಿಗೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು ಆದರ್ಶಗಳು ಹೋರಾಟಗಳನ್ನ ಅರ್ಥೈಸಿಕೊಳ್ಳಬೇಕಾಗುತ್ತದೆ ನಮ್ಮ ಭಾರತದಂತಹ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸಂಪೂರ್ಣವಾದಂತಹ ಮೂಲಭೂತ ಹಕ್ಕುಗಳನ್ನು ಕೊಟ್ಟಂತಹ ಮಹಾನ್ ವ್ಯಕ್ತಿ ಅಂಬೇಡ್ಕರ್ ಹೆಚ್ಚಿನದಾಗಿ ಶಿಕ್ಷಣವು ಒಂದು ಬದಲಾವಣೆಯ ಮೂಲವಾಗಿದೆ. ಶಿಕ್ಷಣ ಸಂಘಟನೆ ಹೋರಾಟದ ತತ್ವ ಸಿದ್ಧಾಂತಗಳನ್ನ ಅರ್ಥೈಸಿಕೊಂಡು ನೊಂದವರ ಪಾಲಿಗೆ ಧ್ವನಿಯಾಗಿ ನ್ಯಾಯದ ಪರ ನಿಂತ್ಕೊಂಡು ಹಲವಾರು ಸಂಘಟನೆಗಳು ಈ ದಿನ ಹೋರಾಟಗಳನ್ನ ಮಾಡುವ ಮುಖಾಂತರ ನ್ಯಾಯವನ್ನ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದೆ.ಅಂತಹ ಹೋರಾಟಗಾರರಿಗೆ ನಮ್ಮ ಪೊಲೀಸ್ ಇಲಾಖೆ ಪರವಾಗಿ ಅಭಿನಂದನೆಗಳನ್ನ ತಿಳಿಸಿದ ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ನವೀನ್ ಕುಮಾರ್

ಈ ಜಗತ್ತಿನಲ್ಲಿ ಅತ್ಯಂತ ಹೆಚ್ಚು ವಿದ್ಯಾಭ್ಯಾಸ ಮಾಡಿದಂತಹ ವ್ಯಕ್ತಿ ಯಾರಾದ್ರೂ ಇದ್ದರೆ ಅದು ಬಾಬಾ ಸಾಹೇಬ್ ಡಾಕ್ಟರ್// ಬಿ.ಆರ್. ಅಂಬೇಡ್ಕರ್.ಕರಡು ಸಮಿತಿ ಸಂವಿಧಾನವನ್ನು ರಚಿಸುವಂತಹ ಸಂದರ್ಭದಲ್ಲಿ ಇರುವಂತಹ ಎಲ್ಲಾ ಸದಸ್ಯರ ಕೆಲಸ ಕಾರ್ಯಗಳಲ್ಲಿ ತೊಡಗಿ ಬ್ಯುಸಿ ಆದಂತಹ ಸಂದರ್ಭದಲ್ಲಿ ಕೆಲವರು ಮೃತರಾದಂತ ಸಂದರ್ಭದಲ್ಲಿ ಅಲ್ಲಿ ಸ್ಥಳೀಯ ರಾಜಕೀಯಕ್ಕಾಗಿ ಹೋಗದೆ ಆಗದೇ ಇರುವಂತಹ ಸಂದರ್ಭದಲ್ಲಿ ಪರಿಪೂರ್ಣವಾಗಿ ಸಂವಿಧಾನವನ್ನು ರಚಿಸಿದಂತಹ ಕೀರ್ತಿ ಡಾ//ಬಿ.ಆರ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ.ಎಂದು ಸ್ಪಷ್ಟತೆಯೊಂದಿಗೆ ವಿಷಯಗಳನ್ನು ಅರ್ಥೈಸಿಕೊಂಡು ವಿಚಾರಗಳನ್ನು ಅರ್ಥಪೂರ್ಣವಾಗಿ ವಿವರಣೆ ನೀಡಿದರು ಇನ್ಸ್ಪೆಕ್ಟರ್ ನವೀನ್ ಕುಮಾರ್.

ಅಂಬೇಡ್ಕರ್ ಅವರು ಬಾಲ್ಯದಲ್ಲಿ ಅನುಭವಿಸಿದಂತಹ ನೋವು ಶೋಷಣೆಗಳಿಗೆ ವಿರುದ್ಧವಾಗಿ ಅತ್ಯಂತ ದೊಡ್ಡ ಶಕ್ತಿಯಾಗಿ ಬೆಳೆದು ನಿಂತರು ಬದಲಾವಣೆಗೆ ದಾರಿದೀಪ ಎಂದು ಸಮಾಜಕ್ಕೆ ತೋರಿಸಿಕೊಟ್ಟಂತಹ ಮಹಾನ್ ವಿಶ್ವಜ್ಞಾನಿ ಬಾಬಾಸಾಹೇಬ್ ಅಂಬೇಡ್ಕರ್.. ತಪ್ಪದೇ ಸಂವಿದಾನದ ಪುಸ್ತಕವನ್ನ ಓದಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ ಎಂದು ಕೊನೆಯದಾಗಿ ಅಂಬೇಡ್ಕರ್ ಜನ್ಮದಿನಾಚರಣೆಯ ಶುಭಾಶಯಗಳನ್ನ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡರು ಹಾಗೂ ದೊಡ್ಬಳ್ಳಾಪುರ ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ನವೀನ್ ಕುಮಾರ್ ರವರು ಸಹ ಶುಭಾಶಯವನ್ನು ತಿಳಿಸಿದರು.

oplus_2097184