ಸುದ್ದಿ

ದೋಷಪೂರಿತ ಸೈಲೆನ್ಸರನ್ನು ಅಳವಡಿಸಿದರೆ ದಂಡ ಖಚಿತ ಸಬ್ ಇನ್ಸ್ ಪೆಕ್ಟರ್:ವರಲಕ್ಷ್ಮಿ

Share It

ಗೌರಿಬಿದನೂರು: ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಬ್ ಇನ್ಸ್ಪೆಕ್ಟರ್ ವರಲಕ್ಷ್ಮಿ ರವರ ಕಾರ್ಯಾಚರಣೆ ನಿಯಮಬಾಹಿರವಾಗಿ ಅಳವಡಿಸಿರುವ ಬೈಕುಗಳ ಸೈಲೆನ್ಸರನ್ನು ತೆಗೆಸಿ ದಂಡ ವಿಧಿಸಲಾಯಿತು.

ಗೌರಿಬಿದನೂರು ತಾಲೂಕಿನಲ್ಲಿ ಸುಮಾರು ಬೈಕುಗಳಲ್ಲಿ ದೋಷಪೂರಿತ ಸೈಲೆನ್ಸರನ್ನು ಅಳವಡಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವಂತಹ ಕೆಲವು ಬೈಕುಗಳನ್ನು ಸಿಸ್ ಮಾಡಿ ದಂಡ ವಿಧಿಸಿ ಅವರಿಗೆ ಅರಿವು ಮೂಡಿಸುವಂತಹ ಕೆಲಸವನ್ನು ಸಹ ಮಾಡಲಾಗಿದೆ. ಹಿರಿಯರು ಹೃದಯಕ್ಕೆ ಸಂಬಂಧಿಸಿದಂತ ಕಾಯಿಲೆ ಇರುವವರು ಪುಟ್ಟ ಮಕ್ಕಳು ಶಾಲಾ ಕಾಲೇಜಿನ ಮಕ್ಕಳು ಓಡಾಡುವಂತಹ ಸ್ಥಳಗಳಲ್ಲಿ ಈ ತರಹ ಸೈಲೆನ್ಸರ್ ಅಳವಡಿಸಿಕೊಂಡು ತೊಂದರೆ ನೀಡುತ್ತಿರುತ್ತಾರೆ ಎಂದು ಸಾರ್ವಜನಿಕರು ಅಧಿಕಾರಿಗಳಿಗೆ ವಿಷಯವನ್ನು ತಿಳಿಸಿರುತ್ತಾರೆ. ಅದರಂತೆ ಕಟ್ಟುನಿಟ್ಟಾಗಿ ಜಾಗೃತಿ ಮೂಡಿಸುವ ಸಲುವಾಗಿ ಮತ್ತು ಈ ತರಹ ದೋಷಪೂರಿತ ಸೈಲೆನ್ಸರನ್ನು ಅಳವಡಿಸಿದರೆ ದಂಡ ಖಚಿತ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದ ಮೊದಲ ಮಹಿಳಾ ಪೊಲೀಸ್ ಅಧಿಕಾರಿ ಸಬ್ ಇನ್ಸ್ಪೆಕ್ಟರ್ ವರಲಕ್ಷ್ಮಿ ರವರು.

ಮಹಿಳಾ ಪೊಲೀಸ್ ಅಧಿಕಾರಿ ವರವಲಕ್ಷ್ಮಿ ರವರಿಗೆ ಗೌರಿಬಿದನೂರು ನಗರ ಹಾಗೂ ಗ್ರಾಮಾಂತರ ಜನತೆಯಿಂದ ಅಭಿನಂದನೆಯ ಮಹಾಪೂರ..