ಸುದ್ದಿ

ಮನೆಯ ಮಕ್ಕಳ ಕಡೆ ಗಮನವಿರಲಿ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಪೋಷಕರಿಗೆ ಕಿವಿಮಾತು:ಡಾ.ಎಂ.ಬಿ. ನವೀನ್ ಕುಮಾರ್

Share It

ಜಕ್ಕಸಂದ್ರ ನಾರಾಯಣಪ್ಪ ಇಂಗ್ಲಿಷ್ ಹೈ ಸ್ಕೂಲ್ ನಲ್ಲಿ 22ನೇ ಶಾಲಾ ವಾರ್ಷಿಕೋತ್ಸವ ಸಂಭ್ರಮ.

“ಅಕ್ಕಪಡೆ” ಪೊಲೀಸ್ ಇಲಾಖೆಯಲ್ಲಿ ಹೊಸ ತಂಡ ರಚಸಿದ ಸರ್ಕಾರ..!

ದೊಡ್ಡಬಳ್ಳಾಪುರ:ತಾಲೂಕಿನ ಪಾಲನ ಜೋಗಿಹಳ್ಳಿ ಗ್ರಾಮದಲ್ಲಿ ಇರುವ ಜಕ್ಕಸಂದ್ರ ನಾರಾಯಣಪ್ಪ ಇಂಗ್ಲಿಷ್ ಹೈಸ್ಕೂಲ್ ನಲ್ಲಿ ನಡೆದ 22ನೇ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಡಾಕ್ಟರ್ ಎಂ.ಬಿ ನವೀನ್ ಕುಮಾರ್ ರವರು ಶಾಲೆಯ ಸಮಾರಂಭದಲ್ಲಿ ಪೋಷಕರಿಗೆ ತಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸುವಂತೆ ಕಿವಿಮಾತು ಹೇಳಿದರು. ದಿನಾ ನಿತ್ಯ ನಮ್ಮ ಮಕ್ಕಳು ಶಾಲಾ ಕಾಲೇಜಿಗೆ ಹೋಗುವುದನ್ನು ಗಮನಿಸಬೇಕು ಮತ್ತು ಮಕ್ಕಳ ಬ್ಯಾಗುಗಳನ್ನು ಪರಿಶೀಲಿಸಬೇಕು ಏಕೆಂದರೆ ಇತ್ತೀಚಿನ ದಿನಗಳಲ್ಲಿ ತಮಗೆ ತಿಳಿದಿರುವ ಹಾಗೆ ಮಾದಕ ವಸ್ತುಗಳು ಹೆಚ್ಚಾಗಿದ್ದು ಅದರಿಂದ ಚಿಕ್ಕ ವಯಸ್ಸಿನ ಮಕ್ಕಳು ಬಲಿಯಾಗುತ್ತಿರುವುದು ಸಮಾಜದಲ್ಲಿ ನಾವು ಕಾಣಬಹುದು.ಗಾಂಜಾ ಡ್ರಗ್ಸ್ ಇನ್ನಿತರ ಮಾದಕ ವಸ್ತುಗಳ ಸೇವನೆಯಿಂದ ಎಷ್ಟೋ ಯುವಕರು ಯುವತಿಯರು ಬಲಿಯಾಗುತ್ತಿರುವುದು ಕಾಣುತ್ತಿದ್ದೇವೆ.ಅದು ಅತಿ ಪರಿಣಾಮಕಾರಿಯಾಗಿದ್ದು. ಅಂತಹ ಮಾದಕ ವಸ್ತುಗಳಿಂದ ಬಲಿಯಾಗಿರುವ ಮಕ್ಕಳ ಎಷ್ಟೋ ತಂದೆ ತಾಯಿಗಳಿಗೆ ನೋವಿನಲ್ಲಿ ಜೀವನ ಕಳೆಯುತ್ತಿದ್ದಾರೆ. ಕಡಿವಾಣ ಹಾಕಲಿಕ್ಕೆ ಪೋಲಿಸ್ ಇಲಾಖೆ ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದೆ.ನಂತರ ರಾಜ್ಯದಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಅಕ್ಕಪಡೆ ಎಂದು ಸರ್ಕಾರ ಪೋಲಿಸ್ ಇಲಾಖೆಯ ಅಧಿಕಾರಿಗಳನ್ನ ವಿಶೇಷ ತಂಡವಾಗಿ ನೇಮಿಸಿದ್ದಾರೆ.ಸಾರ್ವಜನಿಕ ಸ್ಥಳಗಳಲ್ಲಿ ಶಾಲಾ ಕಾಲೇಜು ಆವರಣದಲ್ಲಿ ಮತ್ತು ಊರುಗಳಿಗೆ ಹೋಗಿ ಯಾವಾಗ ಅರಿವು ಮೂಡಿಸುತ್ತಿದ್ದಾರೆ.ನೇರವಾಗಿ ಫೋನ್ ಕಾಲ್ ಮಾಡಬಹುದು ಹೆಣ್ಣು ಮಕ್ಕಳ ರಕ್ಷಣೆಗೆ ಎಂದು ವಿಶೇಷ ತಂಡ ರಚಿಸಿರುವುದು ಬಹಳ ಖುಷಿ ತಂದಿದೆ.ನಿಮ್ಮ ಊರಿನಲ್ಲಿ ಗ್ರಾಮಗಳಲ್ಲಿ ಹೆಣ್ಣು ಮಕ್ಕಳಿಗೆ ತೊಂದರೆ ನೀಡಿದರೆ ನೇರವಾಗಿ ಫೋನ್ ಮಾಡಿ ಎಂದು ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಂ.ಬಿ ನವೀನ್ ಕುಮಾರ್ ರವರು ಶಾಲೆಯ ಸಮಾರಂಭದಲ್ಲಿ ವಿಶೇಷವಾಗಿ ಶಾಲಾ ಮಕ್ಕಳ ಕುರಿತು ಮಕ್ಕಳಿಗೆ ಹಾಗೂ ಪೋಷಕರಿಗೆ ಕಿವಿಮಾತು ಹೇಳಿದರು.