
ದೊಡ್ಡಬಳ್ಳಾಪುರ ತಾಲೂಕು:ಗೂಳ್ಯ ನಂದಗುಂದ ಗ್ರಾಮದ ಸರ್ವೆ ನಂಬರ್ 28 ಹಾಗೂ ಸರ್ವೆ ನಂಬರ್ 30 ಸರ್ಕಾರಿ ಗೋಮಾಳ ಜಮೀನಿನ ವಿಚಾರದಲ್ಲಿ ಪ್ರತಿಭಟನಾಕಾರರ ಮೇಲೆ ಸುಳ್ಳು ಆರೋಪ ಮಾಡಿರುವವರ ಮೇಲೆ ಮಾನ್ಯ ನ್ಯಾಯಾಲಯದಿಂದ ಪಾಠ ಕಲಿಸುವೆ ಎಂದು ಪ್ರಬುದ್ಧ ಕರ್ನಾಟಕ ಭೀಮಸೇನೆಯ ರಾಜ್ಯ ಅಧ್ಯಕ್ಷ ಯು.ಮುನಿರಾಜು ಹಾಗೂ ಕರ್ನಾಟಕ ದಲಿತ ಸಂರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂದರ್ಭ.

ಸಂಬಂಧಪಟ್ಟ ಇಲಾಖೆಗೆ ಸುಮಾರು ಎಂಟು ತಿಂಗಳ ಹಿಂದೆ ದೂರು ದಾಖಲು,ಇತ್ತೀಚಿನ ದಿನಗಳಲ್ಲೂ ಸಹ ಅಧಿಕಾರಿಗಳಿಗೆ ದೂರು ದಾಖಲು, ಮಾನ್ಯ ತಹಸಿಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಕೆ. ಇಲ್ಲಿಯವರೆಗೂ ಅವರ ಮೇಲೆ ಎಫ್ ಐ ಆರ್ ದಾಖಲಾಗಿಲ್ಲ.ದಾಖಲು ಮಾಡುವಂತೆ ಬೃಹತ್ ಪ್ರತಿಭಟನೆ ಧರಣಿ ಮಾಡಿದ ಪ್ರಬುದ್ಧ ಕರ್ನಾಟಕ ಭೀಮಸೇನೆ ಹಾಗೂ ಕರ್ನಾಟಕ ದಲಿತ ಸಂರಕ್ಷಣಾ ಸೇನೆ ಹೋರಾಟಗಾರರ ಮೇಲೆ ಕೆಲ ವ್ಯಕ್ತಿಗಳು ಸುಳ್ಳು ಆರೋಪಗಳನ್ನ ಮಾಡಿ ಅವಮಾನ ಹಾಗೂ ತೇಜುವೊದನೆ ಮಾಡಿರುತ್ತಾರೆ.ಅವರಿಗೆ ಮುಂದಿನ ದಿನಗಳಲ್ಲಿ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯಾಲಯದ ಮುಖಾಂತರ ತಕ್ಕ ಪಾಠ ಕಲಿಸುತ್ತೇವೆ.ಸರ್ಕಾರಿ ಗೋಮಾಳ ಜಮೀನಿನ ಆಸ್ತಿಯನ್ನ ಉಳಿಸುತ್ತೇವೆ. ಎಂದು ದಾಖಲೆ ಸೃಷ್ಟಿಸಿಕೊಂಡಿರುವ ವ್ಯಕ್ತಿಗೆ ಎಚ್ಚರಿಕೆಯನ್ನು ನೀಡಲಾಯಿತು.
ಸರ್ವೆ ನಂಬರ್ 28ರಲ್ಲಿ 8 ಎಕರೆ 14 ಗುಂಟೆ ಸರ್ವೆ ನಂಬರ್ 30ರಲ್ಲಿ 4 ಎಕರೆ 30ಗುಂಟೆ ಸರ್ಕಾರಿ ಗೋಮಾಳ ಜಮೀನನ್ನ ಅಕ್ರಮವಾಗಿ ಅತಿಕ್ರಮಿಸಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಲಪಟಾಯಿಸಿ ಉದ್ದೇಶ ಪೂರಕವಾಗಿ ಪ್ರತಿಭಟನಾಕಾರರ ಮೇಲೆ ಸುಳ್ಳು ಆರೋಪ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಕೊಟ್ಟಿರುವ ಅಧಿಕಾರಿಗಳ ಮೇಲೆಯೂ ಸಹ ಎಫ್ಐಆರ್ ದಾಖಲಿಸಬೇಕು ಇಲ್ಲದಿದ್ದರೆ ಸ್ಥಳದಲ್ಲಿಯೇ ಅನಿರ್ದಿಷ್ಟಾವಧಿ ಧರಣಿಯನ್ನ ಮಾಡುತ್ತೇವೆ ಎಂದು ಎಚ್ಚರಿಸಿದರು.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಬುದ್ಧ ಕರ್ನಾಟಕ ಭೀಮಸೇನೆಯ ರಾಜ್ಯಾಧ್ಯಕ್ಷ ಯು.ಮುನಿರಾಜು. ಹಾಗೂ ಕರ್ನಾಟಕ ದಲಿತ ಸಂರಕ್ಷಣ ಸೇನೆ ರಾಜ್ಯ ಅಧ್ಯಕ್ಷ ಮಂಜುನಾಥ್ ಆರೋಪ ಮಾಡಿರುವವರು ನಮ್ಮನ್ನು ನೇರವಾಗಿ ಚರ್ಚೆಗೆ ಕರೆಯಲಿ ನಾವು ದಾಖಲೆಯೊಂದಿಗೆ ಉತ್ತರ ನೀಡುತ್ತೇವೆ ಎಂದು ಸ್ಪಷ್ಟವಾಗಿ ತಿರುಗೇಟು ನೀಡಿದರು. ಇದೇ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ವಸಂತ್ ಕುಮಾರ್, ರಘುಕುಮಾರ್, ಮಂಜುನಾಥ್, ಮತ್ತು ಭರತ್ ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

