ಸುದ್ದಿ

ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಗ್ಯಾಂಗ್ ಬಂಧಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು

Share It

ದೊಡ್ಡಬಳ್ಳಾಪುರ: ಗಾರೆ ಕೆಲಸ ಬಿಟ್ಟು ಕಾಲೇಜಿನ ಬಳಿ ಗಾಂಜಾ ಮಾರಲು ಯತ್ನಿಸಿದ ಅಂತಾರಾಜ್ಯ ಗಾಂಜಾ ಪೆಡ್ಲರ್ ಗಳನ್ನ ಬಂಧಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು


6 ಲಕ್ಷ ಮೌಲ್ಯದ 5.670 ಕೆಜಿ ಗಾಂಜಾವನ್ನ ಜಪ್ತಿ ಮಾಡಿದ್ದಾರೆ.
ಸೆಪ್ಟೆಂಬರ್ 21ರ ಬೆಳಿಗ್ಗೆ ಗೀತಮ್ ಕಾಲೇಜ್ ಬಳಿಯಿರುವ ಕೆ.ಐ.ಎ.ಡಿ.ಬಿ ಕೈಗಾರಿಕಾ ಪ್ರದೇಶದಲ್ಲಿ ಗಾಂಜಾ ಸೊಪ್ಪು ಮಾರಾಟಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಮೂವರು ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಗ್ಯಾಂಗ್ ನನ್ನ ಬಂಧಿಸಿದ್ದಾರೆ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ


ಬಂಧಿತ ಆರೋಪಿಗಳನ್ನು ಸುರೇಶ ಸಹಾನಿ (34), ರೋಹಿತ್ ಕುಮಾರ್ (25), ರೂಪೇಶ್ ಕುಮಾರ್ (30) ಎಂದು ಗುರುತಿಸಲಾಗಿದೆ, ಆರೋಪಿಗಳು ಬಿಹಾರ ಮತ್ತು ಜರ್ಖಾಂಡ್ ರಾಜ್ಯದವರು, ಗಾರೆ ಕೆಲಸ ಮಾಡುತ್ತಿದ್ದ ಮೂವರು ಗಾರೆ ಕೆಲಸ ಮಾಡುತ್ತಿದ್ದರು.
ಬಂಧಿತರಿಂದ ₹6,00,000 ಮೌಲ್ಯದ 5 ಕೆಜಿ 670ಗ್ರಾಂ ಗಾಂಜಾ ಸೊಪ್ಪು ಹಾಗೂ ಸುಮಾರು ₹1,00,000 ಮೌಲ್ಯದ ಪ್ಯಾಷನ್ ಪ್ರೋ ದ್ವಿ ಚಕ್ರ ವಾಹನವನ್ನು ಜಪ್ವತಿ ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಎಂ.ವಿ., ಅಪರ ಪೊಲೀಸ್‌ ಅಧೀಕ್ಷಕರಾದ ಡಾ.ವೆಂಕಟೇಶ್ ಪ್ರಸನ್ನ, ಲಕ್ಷ್ಮೀನಾರಾಯಣ ಎ.ವಿ, ದೊಡ್ಡಬಳ್ಳಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪಾಂಡುರಂಗ ಡಿ.ವೈ.ಎಸ್.ಪಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಡಾ. ನವೀನ್ ಕುಮಾರ್ ಎಂ.ಬಿ. ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದೆ.
ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪಿ.ಎಸ್.ಐ ನಾರಾಯಣಸ್ವಾಮಿ, ಪ್ರೊ.ಪಿ.ಎಸ್.ಐ ವಿನಾಯಕ ಪಾಟೀಲ್, ಪ್ರೋ ಪಿ.ಎಸ್.ಐ ನಾಗರಾಜು, ರಾಧಾಕೃಷ್ಣ ಎ.ಎಸ್.ಐ, ಹೆಚ್.ಸಿ. ರಂಗನಾಥ್, ಹೆಚ್.ಸಿ. ಸುನಿಲ್ ಭಾಸಗಿ, ಹೆಚ್.ಸಿ ಮಂಜುನಾಥ, ಹೆಚ್.ಸಿ ಚಂದ್ರಶೇಖರ್, ಎ.ಹೆಚ್.ಸಿ ನಟರಾಜು, ಪಿಸಿ ಪ್ರವೀಣ್ ಹಾಗೂ ತಾಂತ್ರಿಕ ಸಿಬ್ಬಂದಿಯವರನ್ನುಎಸ್,ಪಿ ಸಾಹೇಬರು ಶ್ಲಾಘಿಸಿರುತ್ತಾರೆ.