ಸುದ್ದಿ

ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ರವರನ್ನು ಸಿಎಂ ಮಾಡಿ: ಕರೋಹಟ್ಟಿ ಮಹದೇವಯ್ಯ

Share It

ಟಿ.ನರಸೀಪುರ: ದಲಿತ ಸಮುದಾಯದ ಸಚಿವ ಹೆಚ್.ಸಿ. ಮಹದೇವಪ್ಪ ರವರನ್ನು ಮುಖ್ಯಮಂತ್ರಿ ಮಾಡಿ

ಸಮಾಜ ಕಲ್ಯಾಣ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ರವರನ್ನು ಮುಖ್ಯಮಂತ್ರಿ ಮಾಡುವಂತೆ ಆಗ್ರಹಿಸಿ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂಬೇಡ್ಕರ್ ಅಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ ಮಾತನಾಡಿದರು.ದಲಿತ ಸಮುದಾಯದ ಹಿರಿಯ ನಾಯಕರಾದ ಸಚಿವ ಎಚ್ ಸಿ ಮಹದೇವಪ್ಪ ರಾಜಕೀಯದ ಅನುಭವ ಉಳ್ಳವರು ಮತ್ತು ವಿವಿಧ ಖಾತೆಯನ್ನು ಯಾವುದೇ ಕಪ್ಪು ಚುಕ್ಕಿ ಇಲ್ಲದ ನಿಭಾಯಿಸಿದವರು.

ಕಾಂಗ್ರೆಸ್ ಪಕ್ಷವನ್ನು ದಲಿತ ಸಮುದಾಯವು ದೇಶಾದ್ಯಂತ ಬೆಂಬಲಿಸುತ್ತಾ ಬಂದಿದೆ ಈ ಹಿಂದೆ ದಲಿತ ಸಿಎಂ ಆಗಲು ಎರಡು ಬಾರಿ ಕೈ ತಪ್ಪಿದೆ.
ಈ ಬಾರಿ ಅವಕಾಶ ಒದಗಿ ಬಂದಿದೆ. ಸಿಎಂ ಸಿದ್ದರಾಮಯ್ಯ ಮುಂದುವರೆದರೆ ನಮ್ಮ ಅಭ್ಯಂತರವಿಲ್ಲ. ಸಿಎಂ ಬದಲಾವಣೆಯಾದರೆ ದಲಿತ ನಾಯಕರಾದ ಸಚಿವ ಹೆಚ್. ಸಿ ಮಹದೇವಪ್ಪ ರವರನ್ನು ಮುಖ್ಯಮಂತ್ರಿ ಮಾಡಬೇಕು ಕಾಂಗ್ರೆಸ್ ಪಕ್ಷಕ್ಕೇ ಪರಿಶಿಷ್ಟ ಜಾತಿಯ ಋಣ ತಿರಿಸಬೇಕೆಂದು ಎಂದು ಪಕ್ಷತೀತವಾಗಿ ಒತ್ತಾಯಿಸಿದರು.

ಈ ಸಂದರ್ಭ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಪಕ್ಷದ ಮುಖಂಡರುಗಳು ಭಾಗಿಯಾಗಿದ್ದರು.