ಸುದ್ದಿ

ಮಾದಕ ವಸ್ತು ಬಗ್ಗೆ ಜಾಗೃತಿ ಸಭೆ: ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದ ಇನ್ಸ್ ಪೆಕ್ಟರ್: ಸಾದಿಕ್ ಪಾಷಾ

Share It

ಶ್ರೀ ದೇವರಾಜ ಅರಸು ಪದವಿ ಪೂರ್ವ ಕಾಲೇಜು, ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಇಂದು ದೊಡ್ಡಬಳ್ಳಾಪುರದ ಶ್ರೀ ದೇವರಾಜ್ ಅರಸು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷವಾಗಿ ಮಾದಕ ದ್ರವ್ಯ ವಸ್ತು ವಿನ ಬಗ್ಗೆ ಜಾಗೃತಿ ಸಭೆಯನ್ನ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಸಾದಿಕ್ ಪಾಷಾ ಮತ್ತು ಸಬ್ ಇನ್ಸ್ಪೆಕ್ಟರ್ ಚಂದ್ರಕಲಾ ರವರು ಭೇಟಿ ನೀಡಿ ಅರಿವು ಮೂಡಿ ಕಾರ್ಯವನ್ನು ಮಾಡಿದರು. ಮಾದಕ ವಸ್ತು ಎಂದರೇನು? ಅದರಿಂದ ಎಷ್ಟು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಬಹುದೊಡ್ಡ ಮಾಫಿಯಾ ಇದಾಗಿದ್ದು ಬಲವಂತವಾಗಿ ನಿಮ್ಮನ್ನು ಯಾರಾದರೂ ಮಾದಕ ವಸ್ತು ಸೇವಿಸು ಎಂದಾಗ ಎಚ್ಚರದಿಂದಿರಬೇಕು ಸೇವಿಸಬಾರದು ಆ ತರಹ ವ್ಯಕ್ತಿಗಳು ಕಂಡು ಬಂದರೆ ಗುಪ್ತವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿ.

ನಿಮ್ಮ ಗುರಿ ವಿದ್ಯಾಭ್ಯಾಸದ ಕಡೆ ಗಮನಹರಿಸಿ. ನೆನಪಿರಲಿ ಯಾವ ಯಾವ ರೂಪದಲ್ಲಿ ಮಾದಕ ವಸ್ತು ಇರುತ್ತದೆ ಎಂದು ಎನ್ನುವುದರ ಬಗ್ಗೆ ತಿಳಿದುಕೊಂಡಿರಬೇಕು ಎಂದು ವಿದ್ಯಾರ್ಥಿಗಳ ಮುಂದೆ ಪಿಪಿಟಿ ಮಾಡಿ ಸಂಪೂರ್ಣವಾಗಿ ತೋರಿಸುವ ಮುಖಾಂತರ ವಿವರಿಸಿದರು ಸಿರಂಜ್ ,ಸೊಪ್ಪು, ಲಿಕ್ವಿಡ್, ಮಾತ್ರೆಗಳು, ಎಂದು ವಿದ್ಯಾರ್ಥಿಗಳಿಗೆ ಬಹಳ ಸ್ಪಷ್ಟವಾಗಿ ಉತ್ತರಿಸಿದರು ಸುಮಾರು ಪ್ರಕರಣಗಳು ನಮ್ಮ ಠಾಣೆಯಲ್ಲಿ ದಾಖಲಾಗಿರುತ್ತದೆ. ಅನುಮಾನವಾಗಿ ನಿಮಗೆ ಯಾರಾದರೂ ಮಾದಕ ವಸ್ತು ಮಾರಾಟ ಮಾಡುವವರು ಕಂಡು ಬಂದರೆ ಹೆಲ್ಪ್ ಲೈನ್ ಗೆ ಕರೆ ಮಾಡಿ ಮಾಹಿತಿ ಕೊಡಿ ಅಂತಹ ವ್ಯಕ್ತಿಗಳು ಅಂದರೆ ಪೆಡ್ಲರ್ಸ್ ಗಳನ್ನ ಹಿಡಿದು ಕಾನೂನು ರೀತಿ ಕ್ರಮ ಜರುಗಿಸುತ್ತೇವೆ. ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಹುಷಾರಾಗಿರಿ ಎಚ್ಚರದಿಂದಿರಿ ಒತ್ತಡಕ್ಕೆ ಸಿಲುಕಬೇಡಿ ನಿಮ್ಮ ಜೀವನ ನಿಮ್ಮ ಕೈಯಲ್ಲಿ ನೀವೇ ಹಾಳು ಮಾಡಿಕೊಳ್ಳದಿರಿ ಎಂದು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ.