ಸುದ್ದಿ

ಜಕ್ಕಸಂದ್ರ ನಾರಾಯಣಪ್ಪ ಇಂಗ್ಲಿಷ್ ಹೈಸ್ಕೂಲ್ (ಮಾರುತಿ ಎಜುಕೇಶನ್ ಟ್ರಸ್ಟ್)

Share It

ಅಜ್ಞಾನ ನಿಮ್ಮಲ್ಲಿ ಭಯವನ್ನುಂಟು ಮಾಡಿದರೆ, ಭಯ ನಿಮ್ಮಲ್ಲಿ ಅಜ್ಞಾನವನ್ನುಂಟು ಮಾಡುತ್ತದೆ, ಈ ಎರಡನ್ನು ಓಡಿಸುವ ಏಕೈಕ ಅಸ್ತ್ರ ವಿದ್ಯೆ.

ಇಂತಹ ಸಂಪತ್ತನ್ನು ನಮ್ಮಿಂದ ಯಾರು ಸಹ ಕಸಿದುಕೊಳ್ಳಲಾರರು.

ಶಿಕ್ಷಣವೇ ಪ್ರಬಲ ಅಸ್ತ್ರ!!
ಇದು ಜಗತ್ತನ್ನು ಬದಲಾಯಿಸಬಹುದು.ಶಿಕ್ಷಣವು ಸಾಮಾನ್ಯವಾಗಿ ಪ್ರಿಸ್ಕೂಲ್, ಪ್ರಾಥಮಿಕ ಶಾಲೆ, ಸೆಕೆಂಡರಿ ಶಾಲೆ ಮತ್ತು ನಂತರ ಕಾಲೇಜು, ವಿಶ್ವವಿದ್ಯಾಲಯ ಅಥವಾ ಶಿಷ್ಯವೃತ್ತಿಯ ಎಂದು ಹಲವು ಹಂತಗಳಲ್ಲಿ ವಿಂಗಡಿಸಲಾಗಿದೆ. ಶಿಕ್ಷಣ/ವಿದ್ಯೆ ಕಲಿಸುವಾತನೆ ಶಿಕ್ಷಕ.ಇಂತಹ ಶಿಕ್ಷಣವನ್ನು ಸತತವಾಗಿ 23 ವರ್ಷಗಳಿಂದ ದೊಡ್ಡಬಳ್ಳಾಪುರದ ಪಾಲನ ಜೋಗಿಹಳ್ಳಿಯಲ್ಲಿ ಶ್ರೀ ಮಾರುತಿ ಎಜುಕೇಶನ್ ಟ್ರಸ್ಟ್ ರವರು ಜಕ್ಕಸಂದ್ರ ನಾರಾಯಣಪ್ಪ ಇಂಗ್ಲಿಷ್ ಸ್ಕೂಲ್ ಎಂಬ ವಿದ್ಯಾಲಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಎಲ್ಲಾ ಸಹಪಠ್ಯ ಚಟುವಟಿಕೆಗಳನ್ನು ಮಕ್ಕಳಿಗೆ ನೀಡುತ್ತಿದ್ದಾರೆ.

ಈ ಶಾಲೆಯ ಇನ್ನೊಂದು ವಿಶೇಷತೆ ಎಂದರೆ ಕೂಲಿ ಕಾರ್ಮಿಕರ ಮಕ್ಕಳು, ಫ್ಯಾಕ್ಟರಿ ಕಾರ್ಮಿಕರು, ಕಡು ಬಡವರು, ಹಾಗೂ ಕೃಷಿಕ ಕುಟುಂಬದಿಂದ ಬರುವ ಹಲವಾರು ಮಕ್ಕಳು ಈ ಶಾಲೆಯಲ್ಲಿ ಶಿಕ್ಷಣವನ್ನು ಪಡೆದು ಎಲ್ಲಾ ವಿದ್ಯಾರ್ಥಿಗಳು ಉತ್ತಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶಾಲೆಯ ಸಿಬ್ಬಂದಿಗಳು ಸಹ ಯಾವುದೇ ಭೇದ ಭಾವವಿಲ್ಲದೆ ವಿದ್ಯಾರ್ಥಿಗಳಿಗೆ ಬೇಕಾದ ಸಹಾಯವನ್ನು ನೀಡಿ ಉತ್ತಮ ಫಲಿತಾಂಶ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ನೀಡುವ ಸಲುವಾಗಿ ಒಳ್ಳೆಯ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡಿದ್ದಾರೆ. ಎಲ್ಲರೂ ಕೂಡ B A. B.ED, MA.B.ED, B.SC. B.ED, M.SC. B. ED ಈ ರೀತಿ ನುರಿತವಾದ ಶಿಕ್ಷಣವನ್ನು ಪಡೆದಿರುವ ಶಿಕ್ಷಕರಿಂದ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುತ್ತಿದ್ದಾರೆ. ಚಟುವಟಿಕೆ ಆಧಾರಿತವಾದ ಶಿಕ್ಷಣವನ್ನು ನೀಡಬೇಕೆಂದು ಬಯಸುತ್ತಾರೋ ಅದಕ್ಕೆ ಪೂರಕವಾಗಿರುವಂತಹ ಶಿಕ್ಷಣವನ್ನು ಈ ಶಾಲೆಯಲ್ಲಿ ನೀಡುತ್ತಿದ್ದಾರೆ. ಈ ಶಾಲೆಯಲ್ಲಿ 500 ಮಕ್ಕಳಿಗಿಂತಲು ಹೆಚ್ಚು ವಿದ್ಯಾರ್ಥಿಗಳು ಉನ್ನತವಾದ ಶಿಕ್ಷಣವನ್ನು ಪಡೆಯುತ್ತಿದ್ದಾರೆ. SSLC ಯಲ್ಲಿ ಸತತವಾಗಿ 5 ವರ್ಷದಿಂದ 100 ಕ್ಕೆ 100 ಉತ್ತಮ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ. ವಿವಿಧ ಶಾಲೆಗಳ ಪೈಪೋಟಿ ಎಂದು ಬಂದರೆ ಇವರು ತುಂಬಾ ಕಡಿಮೆ ಶಾಲಾ ಶುಲ್ಕವನ್ನು ನಿಗದಿಪಡಿಸಿ ಈ ಶಾಲೆಯನ್ನು ಉನ್ನತ ಮಟ್ಟದಲ್ಲಿ ಮುನ್ನೆಡೆಸಿಕೊಂಡು ಬರುತ್ತಿದ್ದಾರೆ.

ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆ ತರಬೇಕು, ಜೀವನ ಮುನ್ನಡೆಸುವ ಸಾಮರ್ಥ್ಯ ನೀಡಬೇಕು ಎಂಬುದು ಶಾಲೆಯ ಪ್ರಮುಖ ಉದ್ದೇಶವಾಗಿದೆ. ಇದರ ಶಾಲಾ ಕಟ್ಟಡ, ಆಟದ ಮೈದಾನ, ಕಂಪ್ಯೂಟರ್ ಲ್ಯಾಬ್ ಮತ್ತು ವಿಜ್ಞಾನದ ಲ್ಯಾಬ್ ಎಲ್ಲವೂ ಕೂಡ ಬಹಳ ಸುಸರ್ಜಿತವಾಗಿದೆ. ಅದಲ್ಲದೆ ಮಕ್ಕಳಿಗೆ ಉಚಿತವಾಗಿ ಯೋಗ ಮತ್ತು ಕರಾಟೆ ತರಬೇತಿಗಳನ್ನು ಸಹ ಇವರೇ ನಡೆಸುತ್ತಿದ್ದಾರೆ. ನಗರ ಭಾಗವಲ್ಲದೆ ಹಳ್ಳಿಭಾಗದಿಂದಲೂ ಶಾಲೆಗೆ ಬರುವುದರಿಂದ 4 ವ್ಯಾನ್ ಗಳ ಸೌಲಭ್ಯವಿದೆ. ಈ ವಿದ್ಯಾಸಂಸ್ಥೆಯು ದಿವಂಗತ ಲಕ್ಷ್ಮೀನಾರಾಯಣ ಅವರ ಹೆಸರಿನಲ್ಲಿ ಸ್ಥಾಪನೆಯಾಗಿ ಇಂದು ಅಜರಾಮರವಾಗಿ ನಡೆದುಕೊಂಡು ಬಂದಿದೆ. ಎಲ್ಲಾ ಮಕ್ಕಳಿಗೂ ಸಹ ಉತ್ತಮ ಶಿಕ್ಷಣ ಸಂಪೂರ್ಣವಾಗಿ ದೊರಕಬೇಕು ಎಂಬುದು ಈ ಶಾಲೆಯ ಪ್ರಮುಖ ಉದ್ದೇಶವಾಗಿದೆ. ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆ ತರಬೇಕು. ಜೀವನ ಮುನ್ನಡೆಸುವ ಸಾಮರ್ಥ್ಯ ನೀಡಬೇಕು…….

“ಶಿಕ್ಷಣವು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು”