
ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆ ಬಡವರಿಗೆ ನರಕ ಹಣವಂತರಿಗೆ ಸ್ವರ್ಗನಾ..?
ಇನ್ಸ್ಪೆಕ್ಟರ್ ಮುತ್ತುರಾಜ್ ಹಾಗೂ ಕೆಲ ಸಿಬ್ಬಂದಿಗಳ ವರ್ತನೆಗೆ ಸಾರ್ವಜನಿಕ ಆಕ್ರೋಶ ನೊಂದ ಮಹಿಳೆಗೆ ನ್ಯಾಯ ಬದಲು ಅವಮಾನ
ದೊಡ್ಡಬಳ್ಳಾಪುರ: ಮಹಿಳಾ ಪೊಲೀಸ್ ಠಾಣೆ ಎಂದರೆ ನೊಂದ ಮಹಿಳೆಯರಿಗೆ ರಕ್ಷಣೆ ಕೊಡುವ ದೇವಾಲಯ ಎಂದು ಜನ ನಂಬಿದ್ದಾರೆ. ಆದರೆ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆ ಇತ್ತೀಚೆಗೆ ಆ ನಂಬಿಕೆಯನ್ನೇ ಹುಸಿಗೊಳಿಸುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸುಮಾರು ವರ್ಷಗಳಿಂದ ಮೇಲಧಿಕಾರಿಗಳ ಗಮನಕ್ಕೆ ಬಾರದೆ ಇಲ್ಲಿ ಸಾರ್ವಜನಿಕರು, ಅದರಲ್ಲೂ ಬಡ ಮಹಿಳೆಯರು ನೊಂದಿರುವುದು ಗುಟ್ಟಾಗಿ ಉಳಿದಿತ್ತು. ತೊಂದರೆ ತಾಳಲಾರದೆ ಕಣ್ಣೀರು ಹಾಕುತ್ತಾ ಮನೆಗೆ ಹೋದ ಎಷ್ಟು ನೊಂದ ಮಹಿಳೆಯರ ಕುಟುಂಬಗಳನ್ನು ನೋಡಬಹುದು.
ನಿನ್ನೆ ನಡೆದ ಘಟನೆಯೇ ಇದಕ್ಕೆ ಸಾಕ್ಷಿ
ತನ್ನ ಗಂಡ ಅಕ್ರಮ ಸಂಬಂಧ ಇಟ್ಟುಕೊಂಡು ಡೈವರ್ಸ್ ಕೂಡ ಕೊಡದೆ ಎರಡನೇ ಮದುವೆಯಾಗಿ ತನ್ನ ಜೀವನ ಹಾಳು ಮಾಡಿದ್ದಾನೆ ಎಂದು ನ್ಯಾಯ ಕೇಳಲು ಬಂದಿದ್ದ ಒಬ್ಬ ನೊಂದ ಮಹಿಳೆಯ ಜೊತೆ ನಡೆದುಕೊಂಡ ರೀತಿ ಅಮಾನವೀಯ.
ಆರೋಪದ ಪ್ರಕಾರ, ಇನ್ಸ್ಪೆಕ್ಟರ್ ಮುತ್ತುರಾಜ್ ರವರು ನೊಂದ ಮಹಿಳೆಯ ವಿಚಾರಣೆಯನ್ನೇ ಮಾಡದೆ, ಆಕೆಯ ಪರವಾಗಿ ಬಂದಿದ್ದ ವಕೀಲರು, ದಲಿತ ಮುಖಂಡರು ಮತ್ತು ಪತ್ರಕರ್ತರಿಗೂ ಕನಿಷ್ಠ ಬೆಲೆ ಕೊಡದೆ, ವಿಷಯ ಏನೆಂದು ತಿಳಿಯದೆ ಏಕಾಏಕಿ “ತರಲೆ ಕೇಸು” ಎಂದು ಏಕವಚನದಲ್ಲಿ ಅವಾಚ್ಯವಾಗಿ ಮಾತನಾಡಿದ್ದಾರೆ.
ಇದರಿಂದ ಬೇಸತ್ತ ದಲಿತ ಮುಖಂಡರು, ವಕೀಲರು ಮತ್ತು ನೊಂದ ಮಹಿಳೆಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ಸಾರ್ವಜನಿಕ ವಲಯದಲ್ಲಿ “ಮಹಿಳಾ ಪೊಲೀಸ್ ಠಾಣೆ ಎಂದರೆ ಹಣ ಇದ್ದರೆ ಮಾತ್ರ ಹೋಗಬೇಕು, ಬಡವರು ಹೋಗಬಾರದು” ಎಂಬ ಕೆಟ್ಟ ಪರಿಚಯ ದೊಡ್ಡ ಮಟ್ಟದಲ್ಲಿ ಹರಡಿದೆ.
ಇಷ್ಟೆಲ್ಲಾ ಆದರೂ ಮೇಲಿನ ಅಧಿಕಾರಿಗಳಿಗೆ ವಿಷಯ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಯಾರೋ ಒಬ್ಬ ಪ್ರಭಾವಿ ವ್ಯಕ್ತಿಗೆ ಮಣಿದು ಅನ್ಯಾಯವನ್ನು ಎತ್ತಿಹಿಡಿದು ನ್ಯಾಯವನ್ನು ಮುಚ್ಚಿಡಲು ಪ್ರಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.
ಒಬ್ಬ ಮಹಿಳೆ ತನ್ನ ಗಂಡನಿಗಾಗಿ, ತನ್ನ ಮಕ್ಕಳ ಜೀವನವನ್ನು ಕಾಪಾಡಲು ಹೋರಾಟ ಮಾಡುತ್ತಿದ್ದರೆ, ರಕ್ಷಣೆ ಕೊಡಬೇಕಾದ ಠಾಣೆಯಲ್ಲೇ ಆಕೆಗೆ ಅವಮಾನವಾದರೆ ಆಕೆ ಎಲ್ಲಿಗೆ ಹೋಗಬೇಕು.
ನಮ್ಮ ಒತ್ತಾಯ:ಮೇಲಿನ ಅಧಿಕಾರಿಗಳಾದ ಎಸ್ಪಿ ಬೆಂಗಳೂರು ಗ್ರಾಮಾಂತರ ರವರು ಕೂಡಲೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯ ಕೆಲ ಅಧಿಕಾರಿಗಳನ್ನ 95% ಸಿಬ್ಬಂದಿ ವರ್ಗದವರನ್ನ ಕೂಡಲೇ ವರ್ಗಾವಣೆ ಮಾಡಬೇಕು. ಇಲ್ಲವಾದರೆ ನೊಂದ ಮಹಿಳೆಯರ ಆಕ್ರೋಶ ಮುಂದಿನ ದಿನಗಳಲ್ಲಿ ಬೀದಿ ಹೋರಾಟಕ್ಕೆ ತಿರುಗಿದರೆ, ಜನ ಕಲ್ಲಿನಲ್ಲಿ ಹೊಡೆಯುವ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ.
ನ್ಯಾಯಕ್ಕಾಗಿ ಈ ವರದಿಯನ್ನು ಬಹಳ ಬೇಜಾರಿನಿಂದ ಮಾಡುತ್ತಿದ್ದೇವೆ. ಯು ಮುನಿರಾಜು
ಮಹಿಳಾ ಠಾಣೆ ಎಂದರೆ ರಕ್ಷಣೆಯ ದೇವಾಲಯವಾಗಬೇಕು, ಹೊರತು ಹಾವುಗಳ ಹುತ್ತವಾಗಬಾರದು. ಮೇಲಿನ ಅಧಿಕಾರಿಗಳು ಕೂಡಲೇ ಈ ಹುತ್ತವನ್ನು ಸ್ವಚ್ಛ ಮಾಡಬೇಕು.
ಇಲ್ಲದಿದ್ದರೆ ಸಾರ್ವಜನಿಕರೇ ಬಂದು ಹಾವುಗಳನ್ನು ಹೊಡೆದು ಹಾಕಬೇಕಾಗುತ್ತದೆ.ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆ ಒಂದು ಹುತ್ತವಿದ್ದಂತೆ, ಅದರಲ್ಲಿರುವ ವಿಷದ ಹಾವುಗಳನ್ನು ಹಿಡಿದು ಕಾಡಿಗೆ ಬಿಡಿ
ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆ ಎಂದರೆ ಒಂದು ಕಾಲದಲ್ಲಿ ನೊಂದ ಮಹಿಳೆಯರ ಪಾಲಿನ ದೇವಾಲಯವಾಗಿತ್ತು. ಇಲ್ಲಿ ಎಷ್ಟೋ ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿಗಳು ಬಂದು ಹೋಗಿದ್ದಾರೆ. ಅವರು ಮಾಡಿದ ಒಳ್ಳೆಯ ಕೆಲಸ ಕಾರ್ಯಗಳಿಂದ ಇಂದಿಗೂ ಜನರ ಮನಸ್ಸಿನಲ್ಲಿ, ಮನೆಗಳಲ್ಲಿ ಉಳಿದಿದ್ದಾರೆ.
ಆದರೆ ಇಂದು ಅದೇ ಠಾಣೆ ಒಂದು ಹುತ್ತವಿದ್ದಂತೆ ಆಗಿದೆ.
ಈ ಹುತ್ತದಲ್ಲಿ ಕೆಲವು ವಿಷದ ಹಾವುಗಳು ಸೇರಿಕೊಂಡಿವೆ. ಈ ಹಾವುಗಳು ಬಡ, ನೊಂದ, ದಲಿತ ಮಹಿಳೆಯರನ್ನು ಕಂಡರೆ ಬುಸುಗುಡುತ್ತವೆ, ದೌರ್ಜನ್ಯದ ದೂರು ಕೊಟ್ಟರೆ “ತರಲೆ ಕೇಸು” ಎಂದು ಏಕವಚನದಲ್ಲಿ ಅವಮಾನ ಮಾಡುತ್ತವೆ. ಅದೇ ಹಣವಿರುವ, ಪ್ರಭಾವಿ ವ್ಯಕ್ತಿಗಳನ್ನು ಕಂಡರೆ ಮೈಮೇಲೆ ಹರಿದಾಡುತ್ತವೆ, ಅವರ ಪರವಾಗಿ ನ್ಯಾಯವನ್ನು ಮುಚ್ಚಿಡುತ್ತವೆ.
ನಿನ್ನೆ ಒಬ್ಬ ನೊಂದ ಮಹಿಳೆಯ ಪ್ರಕರಣದಲ್ಲಿ ಇನ್ಸ್ಪೆಕ್ಟರ್ ಮುತ್ತುರಾಜ್ ರವರು ನಡೆದುಕೊಂಡ ರೀತಿ ಇದಕ್ಕೆ ಜೀವಂತ ಉದಾಹರಣೆ. ವಕೀಲರಿಗೂ, ದಲಿತ ಮುಖಂಡರಿಗೂ, ಪತ್ರಕರ್ತರಿಗೂ ಕನಿಷ್ಠ ಗೌರವ ಕೊಡದ ಅವರ ದುರಹಂಕಾರದ ವರ್ತನೆಗೆ ಇಡೀ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ.
ಆದ್ದರಿಂದ ಮೇಲಿನ ಅಧಿಕಾರಿಗಳಲ್ಲಿ ನಮ್ಮ ನೇರ ಮನವಿ ನೂರಕ್ಕೆ ರೂ.95% ಮಹಿಳಾ ಠಾಣೆಯ ಸಿಬ್ಬಂದಿ ಗಳನ್ನ ಕಂಡರೆ ಸಾರ್ವಜನಿಕರಿಗೆ ಕೆಟ್ಟ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಈ ಹುತ್ತದಲ್ಲಿರುವ ಹಾವುಗಳನ್ನು ಕೂಡಲೇ ಹಿಡಿದು ಕಾಡಿಗೆ ಬಿಡಿ. ಪ್ರಾಮಾಣಿಕ ಅಧಿಕಾರಿಗಳಿದ್ದಂತಹ ಪವಿತ್ರ ಜಾಗವನ್ನು ಮತ್ತೆ ಸ್ವಚ್ಛಗೊಳಿಸಿ. ಇಲ್ಲವಾದರೆ ಬೇಸತ್ತಿರುವ ಸಾರ್ವಜನಿಕರೇ ಹುತ್ತಕ್ಕೆ ಬೆಂಕಿ ಇಡಬೇಕಾಗುತ್ತದೆ.

