
ದೊಡ್ಡಬಳ್ಳಾಪುರ: ಮನೆಗಳ್ಳತನ ಪ್ರಕರಣ ಭೇದ ಕುಖ್ಯಾತ ಆರೋಪಿ ಬಂಧನ, 25 ಲಕ್ಷ ಮೌಲ್ಯದ 163 ಗ್ರಾಂ ಚಿನ್ನಾಭರಣ ಹಾಗೂ ನಗದು ವಶ
ದಿನಾಂಕ: 27-09-2026 ರಂದು ಪಿರ್ಯಾದುದಾರರು ನೀಡಿದ ಮನೆಗಳ್ಳತನ ದೂರಿನ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಚಂದ್ರಕಾಂತ್ M.B IPS ರವರು, ಅಪರ ಪೊಲೀಸ್ ಅಧೀಕ್ಷಕರಾದ ಡಾ. ವೆಂಕಟೇಶ್ ಪ್ರಸನ್ನ ರವರು ಹಾಗೂ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಲಕ್ಷ್ಮೀನಾರಾಯಣ M.B KSP ರವರು ಮತ್ತು ದೊಡ್ಡಬಳ್ಳಾಪುರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಪಾಂಡುರಂಗ B YSP ರವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ಈ ತಂಡವು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಡಾ. M.B ನವೀನ್ ಕುಮಾರ್ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದೆ.
ಬಂಧಿತ ಆರೋಪಿ:
ಭದ್ರಪ್ಪ ಬಸಪ್ಪ ಹಡಪದ, 30 ವರ್ಷ,ಕೆಲಸ: ಓಂ ನರ್ಸಿಂಗ್ ಸರ್ವಿಸ್ ನಲ್ಲಿ ಕೆಲಸ,
ವಾಸ: ಅರಳು ಮಲ್ಲಿಗೆ, ದೊಡ್ಡಬಳ್ಳಾಪುರ ತಾಲ್ಲೂಕು,
ಸ್ವಂತ ಊರು: ಮೊನೋರು ಗ್ರಾಮ, ಸಿಂದಗಿ ತಾಲ್ಲೂಕು, ವಿಜಯಪುರ ಜಿಲ್ಲೆ.
ವಶಪಡಿಸಿಕೊಂಡ ಸ್ವತ್ತು:
- 45 ಗ್ರಾಂ ತೂಕದ 2 ಹೇಲಿ ಅವಲಕ್ಕಿ ಚೈನ್
- 62 ಗ್ರಾಂ ತೂಕದ 2 ಹೇಲಿ ಮಾಂಗಲ್ಯ ಚೈನ್
- 55 ಗ್ರಾಂ ತೂಕದ 4 ಚಿನ್ನದ ಬಳೆಗಳು
- ರೂ. 25,000/- ನಗದು ಹಣ
ಒಟ್ಟು 163 ಗ್ರಾಂ ತೂಕದ ಚಿನ್ನಾಭರಣ ಹಾಗೂ ನಗದು ಸೇರಿ ಒಟ್ಟು 25 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ PSI ನಾರಾಯಣಸ್ವಾಮಿ, PSI ಚಂದ್ರಕಲಾ, PSI ವಿನಾಯಕ ಪಾಟೀಲ್, PSI ನಾಗರಾಜು, ASI ರಾಧಾಕೃಷ್ಣ, ಸಿಬ್ಬಂದಿಗಳಾದ ರಂಗನಾಥ್, ಸುನಿಲ್ ಭಾಸಗಿ, ಮಂಜುನಾಥ್, ನಟರಾಜ್, ಚಂದ್ರಶೇಖರ್, ಪ್ರವೀಣ್ HC-797 ಹಾಗೂ ತಾಂತ್ರಿಕ ಸಿಬ್ಬಂದಿಯವರ ಕಾರ್ಯವನ್ನು SP ಚಂದ್ರಕಾಂತ್ ರವರು ಶ್ಲಾಘಿಸಿರುತ್ತಾರೆ.




