ಸುದ್ದಿ

ಸರ್ಕಾರಿ ಗೋಮಾಳ ಜಮೀನು 6 ಎಕರೆ ಕಾನೂನುಬಾಹಿರವಾಗಿ ಮಂಜೂರು ವಜಾ ಗೊಳಿಸುವಂತೆ ಒತ್ತಾಯಿಸಿ ಧರಣಿ ನಡೆಸಿದ:ಪ್ರಬುದ್ಧ ಕರ್ನಾಟಕ ಭೀಮ ಸೇನೆ

Share It

ದೊಡ್ಡಬಳ್ಳಾಪುರ: ಮೇ: 19 ರಂದು “ಅನಿರ್ದಿಷ್ಟಾವಧಿ ಧರಣಿ “

ಅರೆಹಳ್ಳಿ ಗುಡ್ದದಹಳ್ಳಿ ಗ್ರಾಮದ ಸರ್ವೆ ನಂಬರ್ 57ರಲ್ಲಿ 10 ಎಕರೆ 25 ಗುಂಟೆ ಜಮೀನಿನ ಪೈಕಿ 6 ಎಕರೆ ಗೋಮಾಳದ ಜಮೀನನ್ನ ಕಾನೂನು ಬಾಹಿರವಾಗಿ ಅಧಿಕಾರಿಗಳು ಕೆಲವರಿಗೆ ಮಂಜೂರು ಮಾಡಿದ್ದು ಅದನ್ನು ವಜಾ ಗೊಳಿಸಬೇಕೆಂದು ಪ್ರಬುದ್ಧ ಕರ್ನಾಟಕ ಭೀಮಸೇನೆ ದಿನಾಂಕ 19.05.2025 ರಂದು ಅನಿರ್ದಿಷ್ಟಾವಧಿ ಧರಣಿಯನ್ನ ಹಮ್ಮಿಕೊಂಡಿದ್ದರು. ಸರ್ಕಾರಿ ಗೋಮಾಳದ ಆಸ್ತಿಯನ್ನು ಉಳಿಸಿ ಸರ್ಕಾರಕ್ಕೆ ಹೊಸ ಪಡಿಸಿಕೊಂಡು ಕಡು ಬಡವರಿಗೆ ಭೂಮಿಯನ್ನು ನೀಡಿ ಎಂದು ರಾಜ್ಯಧ್ಯಕ್ಷರಾದ ಯು.ಮುನಿರಾಜುರವರು ಧರಣಿಯ ಸಂದರ್ಭದಲ್ಲಿ ಮಾತನಾಡಿದರು.
ಈಶೂ ರಿಜಿಸ್ಟರ್ ಬುಕ್ ನಲ್ಲಿ 53 ಅರ್ಜಿಯನ್ನು ಸಲ್ಲಿಸಿರುವುದು ನಮುದಾಗಿಲ್ಲ ಮತ್ತು ಓ ಎಂ ಇಲ್ಲ ಕಾನೂನುಬಾಹಿರವಾಗಿ ನಾಲ್ಕು ಜನ ತಲಾ 1 ಎಕರೆ 20 ಗುಂಟೆಯಂತೆ ಅಕ್ರಮವಾಗಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡಿರುವುದು ಅಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. 4 ಜನ ವ್ಯಕ್ತಿಗಳು ಅರೇಹಳ್ಳಿ ಗುಡ್ಡದಹಳ್ಳಿ ಗ್ರಾಮದ ನಿವಾಸಿಗಳಲ್ಲ. ಅವರು ಇಪ್ಪತ್ತು ಮೂವತ್ತು ವರ್ಷಗಳಿಂದ ಉಳುಮೆ ಮಾಡಿರುವ ಯಾವುದೇ ದಾಖಲೆಗಳಿಲ್ಲ ಅದರಲ್ಲಿ ಒಬ್ಬ ವ್ಯಕ್ತಿಗೆ 95-96ನೇ ಇಸವಿಯಲ್ಲಿ ಆ ವ್ಯಕ್ತಿ ಯಾವ ಊರಿನ ನಿವಾಸಿ ಆಗ ಅವನಿಗೆ ವಯಸ್ಸು ಎಷ್ಟು ಇದೀಗ ಅವರಿಗೆ ವಯಸ್ಸು ಎಷ್ಟು ಎಂದು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿ ಮನವಿ ಮಾಡಿದ್ದರು. ಇಷ್ಟೆಲ್ಲ ಇದ್ದರೂ ಕಾನೂನನ್ನು ಉಲ್ಲಂಘನೆ ಮಾಡಿ ಭೂ ಮಾಫಿಯಾದವರ ಜೊತೆಗೂಡಿ ದಾಖಲಾತಿಗಳನ್ನು ಮಾಡಿಕೊಟ್ಟಿರುವ ಅಧಿಕಾರಿಗಳ ಮೇಲೆಯೂ ಸಹ ಕಾನೂನು ರೀತಿ ಕ್ರಮಜರಿಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರು. ಈ ಒಂದು ಧರಣಿಗೆ ಪ್ರಜಾ ವಿಮೋಚನ ಚಳುವಳಿ (ಸಮತಾವಾದ) ಹಾಗೂ ಜನಧ್ವನಿ ವೇದಿಕೆ ಮತ್ತು ರೈತ ಪರ ಸಂಘಟನೆಗಳು ಭಾಗಿಯಾಗಿದ್ದರು.