
ಬೆಂಗಳೂರು: ತನ್ನ ಹೆಂಡತಿಯ ಕುಟುಂಬವನ್ನು ನಾಶ ಮಾಡಿದ ರಕ್ಕಸನಿಗೆ ಕಾನೂನಿನ ಅಡಿಯಲ್ಲಿ ಗಲ್ಲು ಶಿಕ್ಷೆ ಆಗಲೇಬೇಕು ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಭುಗಿಲೆದ್ದಿದೆ.
ಬೆಂಗಳೂರು ಮಾಸ್ ಮರ್ಡರ್: ಊಟದಲ್ಲಿ ಮತ್ತಿನ ಮಾತ್ರೆ ಬೆರೆಸಿ ಕಲ್ಲಿನಿಂದ ಜಜ್ಜಿ ಕೊಲೆ.
ಬೆಂಗಳೂರು, ನವೆಂಬರ್ 06: ಬೆಂಗಳೂರಿನ ಒಂದೇ ಕುಟುಂಬರ್ 7 ಜನರ ಹತ್ಯೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಆರೋಪಿ ಇಂದುಶೇಖರ್ ತನ್ನ ಪತ್ನಿ ಮೇಲಿನ ಕೋಪಕ್ಕೆ ಈ ಕೃತ್ಯ ಎಸಗಿದ್ದಾನೆ.
ಮನೆಗೆ ಒಬ್ಬೊಬ್ಬರನ್ನೇ ಕರೆಸಿಕೊಂಡು ಬಾಡೂಟದ ಆಮಿಷವೊಡ್ಡಿ, ಊಟದಲ್ಲಿ ಮತ್ತಿನ ಮಾತ್ರೆಗಳನ್ನು ಬೆರೆಸಿ ಪ್ರಜ್ಞಾಹೀನರನ್ನಾಗಿ ಮಾಡಿ, ನಂತರ ಒರಳುಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.
ಕೊಲೆ ನಂತರ ಮೃತದೇಹಗಳನ್ನು ಕಾರಿನಲ್ಲಿ ಸಾಗಿಸಿ ಬೇರೆ ಬೇರೆ ಕಡೆ ಎಸೆದಿರುವುದು ಬೆಳಕಿಗೆ ಬಂದಿದೆ. ನಂದಿಬೆಟ್ಟದ ಸುತ್ತಮುತ್ತ ಏಳು ವರ್ಷದ ಪುನೀತ್‌ನ ಶವ ಪತ್ತೆಯಾಗಿದ್ದು, ಇತರ ಶವಗಳ ಶೋಧ ಕಾರ್ಯ ನಡೆಯುತ್ತಿದೆ.
ರಾಜಾಜಿನಗರ ಪೊಲೀಸರು ಆರೋಪಿ ಶೇಖರ್‌ನನ್ನು ಬಂಧಿಸಿದ್ದಾರೆ. 17 ವರ್ಷದ ಪುತ್ರಿ ಸಹ ತಂದೆಯ ಈ ಕೃತ್ಯಕ್ಕೆ ಸಾಥ್ ನೀಡಿರುವ ಶಂಕೆ ವ್ಯಕ್ತವಾಗಿದೆ. ಆಕೆ ಸದ್ಯ ನಾಪತ್ತೆಯಾಗಿದ್ದಾಳೆ. ಎಂದು ಮಾಹಿತಿ ತಿಳಿದಿರುತ್ತದೆ.

