
ದೊಡ್ಡಬಳ್ಳಾಪುರ: ಹಿಲೀನ್ ಹಾಸ್ಪಿಟಲ್ ಹಾಗೂ ಪ್ರಬುದ್ಧ ಕರ್ನಾಟಕ ಭೀಮಸೇನೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಪ್ರಬುದ್ಧ ಕರ್ನಾಟಕ ಭೀಮ ಸೇನೆ ವತಿಯಿಂದ ಇಂದು
ಭಾರತ ರತ್ನ ,ಸಂವಿಧಾನ ಶಿಲ್ಪಿ , ಬಾಬಾ ಸಾಹೇಬ್ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ರವರ 69 ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಪಾಲನಜೋಗಿಹಳ್ಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಶಾಲಾ ಮಕ್ಕಳಿಗೆ…
“ಉಚಿತ ಆರೋಗ್ಯ ತಪಾಸಣಾ ಶಿಬಿರ “
ಬಹಳ ಅದ್ದೂರಿಯಾಗಿ ನಡೆಯಿತು.. ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಡಾಕ್ಟರ್ ವೆಂಕಟೇಶ್ ಪ್ರಸಾದ್ ರವರು ಮಕ್ಕಳಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.ಹಾಗೇ ನಮಗೆ ಶಿಕ್ಷಣ ಹಾಗೂ ಬದುಕನ್ನು ರೂಪಿಸಿಕೊಟ್ಟ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನದ ಚರಿತ್ರೆ ಬಗ್ಗೆ ಮಕ್ಕಳಿಗೆ ವಿಶೇಷವಾಗಿ ಮನದಟ್ಟು ಮಾಡಿದರು.ಮಹಾ ಪರಿನಿರ್ವಾಣದ ದಿನ ನಾವೆಲ್ಲರೂ ಮಹಾನ್ ವ್ಯಕ್ತಿಗೆ ಈ ದಿನ ಗೌರವಪೂರ್ವಕ ನಮನವನ್ನ ಸಲ್ಲಿಸುವ ಸಲುವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಶಾಲೆಯ ಶಿಕ್ಷಕ ಶಿಕ್ಷಕಿಯರಿಗೂ ಹಾಗೂ ನಮ್ಮ ಪ್ರಬುದ್ಧ ಕರ್ನಾಟಕ ಭೀಮ ಸೇನೆಯ ಎಲ್ಲಾ ಮುಖಂಡರಿಗೂ ಹೃತ್ಪೂರ್ವಕ ಅಭಿನಂದನೆಗಳು. ನಮಗೆ ಈ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಸುಮಾರು ಕಾರ್ಯಕ್ರಮಗಳನ್ನ ಪ್ರಬುದ್ಧ ಕರ್ನಾಟಕ ಭೀಮ ಸೇನೆ ಮಾಡಿಕೊಂಡು ಬಂದಿರುತ್ತದೆ. ಇನ್ನು ಹೆಚ್ಚಿನ ಒಳ್ಳೆಯ ಸಮಾಜಕ್ಕೆ ಸಂದೇಶ ಕೊಡುವಂತಹ ಕೆಲಸ ಕಾರ್ಯಗಳನ್ನು ಮಾಡಲಿ ಎಂದು ಹಾರೈಸುತ್ತೇವೆ ಎಂದು ಡಾಕ್ಟರ್ ವೆಂಕಟೇಶ್ ಪ್ರಸಾದ್ ರವರು ತಿಳಿಸಿದರು.







