
ದೊಡ್ಡಬಳ್ಳಾಪುರ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ: ನಗರ ಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ ಪ್ರಬುದ್ಧ ಕರ್ನಾಟಕ ಭೀಮಸೇನೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿದ್ದಾರೆ ಕಾರಣ ಸಾರ್ವಜನಿಕ ಹಿತಾದೃಷ್ಟಿಯಿಂದ ದೊಡ್ಡಬಳ್ಳಾಪುರ ನಗರದಲ್ಲಿ ಸುಮಾರು ಒಂದುವರೆ ಲಕ್ಷ ಜನಸಂಖ್ಯೆ ಇದ್ದು ಅದರಲ್ಲಿ ಮುಖ್ಯವಾಗಿ ನಗರದ ಒಳಗೆ ಯಾರು ಬರ್ತಾರೆ ಹೋಗ್ತಾರೆ ಎಂಬುದು ಗೊತ್ತಾಗಲ್ಲ ಇತ್ತೀಚಿನ ತಿಂಗಳುಗಳಿಂದ ಫಾಕ್ಸನ್ ಐಫೋನ್ ಕಂಪನಿಗಳಿಂದ ಜನಸಂಖ್ಯೆ ಹೆಚ್ಚಾಗಿದ್ದು ಹೊರರಾಜ್ಯದಿಂದ ಹಲವು ದೇಶಗಳಿಂದ ಜನ ಬರುತ್ತಿರುವುದು ಕಾಣಬಹುದು. ಅಪಘಾತಗಳು,ಕಳ್ಳತನ,ಹತ್ಯೆಗಳು,ಆದಾಗ ಪತ್ತೆಹಚ್ಚಲು ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿರುತ್ತದೆ ನಾವು ಪೊಲೀಸರನ್ನು ದೂಷಿಸದೆ ಸಹಕಾರ ನೀಡಬೇಕು ಹಾಗಾಗಿ..
ಸಾರ್ವಜನಿಕ ಹಿತದಷ್ಟಿಯಿಂದ ದೊಡ್ಡಬಳ್ಳಾಪುರ ನಗರದಲ್ಲಿ ಅಂದರೆ ಟಿಬಿ ಸರ್ಕಲ್(ಅಂಬೇಡ್ಕರ್ ವೃತ್ತ )ಹಳೆ ಬಸ್ ಸ್ಟಾಂಡ್ ಸರ್ಕಲ್ ,ಡಿ ಕ್ರಾಸ್, ಟೋಲ್ ಗೇಟ್ ಸರ್ಕಲ್, ರಂಗಪ್ಪ ಸರ್ಕಲ್, ಕೆಸಿಪಿ ಸರ್ಕಲ್ ,ರೈಲ್ವೆ ಸ್ಟೇಷನ್ ,ಜಗದೀಶ್ ವೃತ್ತ, ಬಸವಭವನ,ಮತ್ತು ತಾಲೂಕ್ ಆಫೀಸ್ ಸರ್ಕಲ್, ಅಂತಹ ಜಲಸಂದಣಿ ಇರುವಂತಹ ಸ್ಥಳಗಳಲ್ಲಿ ಉತ್ತಮ ಗುಣಮಟ್ಟದ ಬೆಳಕಿನ ವ್ಯವಸ್ಥೆ ಇರುವಂತಹ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಬೇಕೆಂದು ಪ್ರಬುದ್ಧ ಕರ್ನಾಟಕ ಭೀಮಸೇನೆ ಮಾನ್ಯ ನಗರಸಭೆಯ ಪೌರಾಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು.

